ADVERTISEMENT

ಹಳ್ಳಿಗಳ ಕಡೆಗಣನೆ ಸಲ್ಲ | ‘ರಾಮರಾಜ್ಯ’ದ ಕನಸಿಗೆ ಜೀವ ತುಂಬಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2019, 20:00 IST
Last Updated 9 ಸೆಪ್ಟೆಂಬರ್ 2019, 20:00 IST

ಐದು ವರ್ಷಗಳಲ್ಲಿ ₹ 100 ಲಕ್ಷ ಕೋಟಿ ಬಂಡವಾಳ ಹೂಡುವ ಮುಖಾಂತರ ನಗರಗಳಿಗೆ ಆಧುನಿಕ ಮೂಲಸೌಕರ್ಯ ಒದಗಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಆಶ್ವಾಸನೆ ನೀಡಿದ್ದಾರೆ (ಪ್ರ.ವಾ., ಸೆ. 8). ಅಭಿವೃದ್ಧಿಯಾಗಿರುವ ನಗರಗಳನ್ನೇ ಇನ್ನಷ್ಟು ಅಭಿವೃದ್ಧಿ ಮಾಡಲು ಹೊರಟಿರುವ ಸರ್ಕಾರ, ಹಳ್ಳಿಗಳನ್ನು ಕಡೆಗಣಿಸುತ್ತಿದೆ ಎಂದು ಅನಿಸುತ್ತದೆ. ನಿಜಕ್ಕೂ ಮೂಲಸೌಕರ್ಯಗಳು ಬೇಕಾಗಿರುವುದು ಹಳ್ಳಿಗಳಿಗೆ. ವಿದ್ಯುತ್‌ ಬೆಳಕನ್ನೇ ಕಾಣದ ಅದೆಷ್ಟೋ ಕುಗ್ರಾಮಗಳು, ಗುಣಮಟ್ಟದ ಶಾಲೆಗಳಿಲ್ಲದೆ ಶಿಕ್ಷಣದಿಂದ ವಂಚಿತವಾಗಿರುವ ವಿದ್ಯಾರ್ಥಿಗಳು, ಶ್ರಮಕ್ಕೆ ತಕ್ಕ ಬೆಲೆ ಸಿಗದೆ ನೇಣಿಗೆ ಕೊರಳೊಡ್ಡುತ್ತಿರುವ ರೈತರು, ಉತ್ತಮ ಚಿಕಿತ್ಸೆ ಸಿಗದೆ ನರಳಾಡುತ್ತಿರುವ ರೋಗಿಗಳು ಸರ್ಕಾರದ ಕಣ್ಣಿಗೆ ಕಾಣುತ್ತಿಲ್ಲವೇ? ನಗರಗಳು ಮಾತ್ರ ಈ ಕಾಲಘಟ್ಟಕ್ಕೆ ಅನುಗುಣವಾಗಿ ಬದಲಾದರೆ ಭಾರತ ಬಲಿಷ್ಠವಾಗದು. ಹಳ್ಳಿಗಳು ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಅದಕ್ಕಾಗಿ ಗಾಂಧಿಯವರ ರಾಮರಾಜ್ಯದ ಕನಸಿಗೆ ಜೀವ ತುಂಬಿ, ಭಾರತವನ್ನು ಬಡತನ, ನಿರುದ್ಯೋಗ, ಹಸಿವಿನಿಂದ ಮುಕ್ತಗೊಳಿಸಬೇಕಾಗಿದೆ.

–ನಾಗರಾಜ್ ಗರಗ್, ಹೊಸದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT