ADVERTISEMENT

ಆಂಬುಲೆನ್ಸ್ ಚಾಲಕರ ಅಕ್ರಮ ಕೂಟ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2022, 19:31 IST
Last Updated 29 ಏಪ್ರಿಲ್ 2022, 19:31 IST

ಆಂಧ್ರಪ್ರದೇಶದ ತಿರುಪತಿಯ ಆಸ್ಪತ್ರೆಯೊಂದರಿಂದ ಬಾಲಕನ ಶವ ಸಾಗಿಸಲು ಆಂಬುಲೆನ್ಸ್ ಚಾಲಕರು ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟದ್ದರಿಂದ, ಅದನ್ನು ಭರಿಸಲಾಗದೆ ತಂದೆಯೇ ಶವ‍ವನ್ನು ಬೈಕ್‍ ಮೂಲಕ 90 ಕಿ.ಮೀ. ದೂರದ ಮನೆಗೆ ಸಾಗಿಸಿದ್ದನ್ನು ತಿಳಿದು ತುಂಬಾ ಬೇಸರವಾಯಿತು. ನಮ್ಮ ವ್ಯವಸ್ಥೆಯು ಯಾವ ಮಟ್ಟದಲ್ಲಿದೆ ಎಂಬುದಕ್ಕೆ ಈ ದುರ್ಘಟನೆಯೇ ನಿದರ್ಶನ.

ಆಂಬುಲೆನ್ಸ್ ಚಾಲಕರು ಮನುಷ್ಯತ್ವ ಇಲ್ಲದ ರಾಕ್ಷಸರಂತೆ ನಡೆದುಕೊಂಡಿದ್ದಾರೆ. ದುಡ್ಡಿಗಾಗಿ ಸಿಂಡಿಕೇಟ್ ಮಾಡಿಕೊಂಡಿರುವ ಅವರು ಉಚಿತ ಆಂಬುಲೆನ್ಸ್ ಚಾಲಕನ‍ನ್ನು ಥಳಿಸಿ ವಾಪಸ್ ಕಳುಹಿಸಿರುವುದನ್ನು ನೋಡಿದರೆ, ಸೇವಾ ವಲಯ ಲಾಭ ಗಳಿಸುವ ಉದ್ಯಮದಂತೆ ಭಾಸವಾಗುತ್ತದೆ. ಸರ್ಕಾರ ಇನ್ನಾದರೂ ಇಂತಹ ಅಮಾನವೀಯ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಲಿ.

ಮಹದೇವಸ್ವಾಮಿ ಎಚ್‌.ಬಿ.,ಹಳೇಪುರ, ನಂಜನಗೂಡು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.