ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಸಿಬಿಎಸ್‌ಇ ದಕ್ಷಿಣ ಕೇಂದ್ರ ಕಚೇರಿ ಹಾಗೂ ಯೋಗ
ವಿಶ್ವವಿದ್ಯಾಲಯ ಪ್ರಾರಂಭಿಸುವ ಪ್ರಸ್ತಾವ ಕುರಿತು ಓದಿ ಆಘಾತವುಂಟಾಯಿತು. ಪರಿಸರ ವಿಜ್ಞಾನಿ ಯಲ್ಲಪ್ಪ ರೆಡ್ಡಿ ಹಾಗೂ ಭೂವಿಜ್ಞಾನಿ ಪ್ರೊ. ರೇಣುಕಾ ಪ್ರಸಾದ್ ಅವರ ನೇತೃತ್ವದಲ್ಲಿ ಈ ಆವರಣದಲ್ಲಿ 25 ವರ್ಷಗಳ ಹಿಂದೆ ಮುತುವರ್ಜಿ ವಹಿಸಿ ನೆಟ್ಟು, ಪೋಷಿಸಿದ್ದ ಗಿಡಗಳು ಇಂದು ವೃಕ್ಷಗಳಾಗಿ ಪಕ್ಷಿಸಂಕುಲಕ್ಕೆ ಆಶ್ರಯ ಕೊಟ್ಟಿವೆ. ಇಂತಹ ಆವರಣದಲ್ಲಿ ಕಾಂಕ್ರೀಟ್ ಕಟ್ಟಡ ನಿರ್ಮಾಣ ಮಾಡಲು ಹೊರಟಿರುವುದು ದುರ್ದೈವದ ಸಂಗತಿ.
ಇದರ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳ ಪಾತ್ರ ಎದ್ದು ಕಾಣುತ್ತಿದೆ.ಆ ಆವರಣದಲ್ಲಿ ಪ್ರಸ್ತುತ ಯೋಜನೆಯನ್ನು ಕಾರ್ಯರೂಪಕ್ಕೆ ತಂದದ್ದೇ ಆದರೆ ಸಹಸ್ರಾರು ವೃಕ್ಷಗಳ ಮಾರಣಹೋಮ ನಡೆಯುತ್ತದೆ. ‘ವೃಕ್ಷೋ ರಕ್ಷತಿ ರಕ್ಷಿತಃ’ ಎಂಬ ನಾಣ್ನುಡಿಯಂತೆ ನಾವು ವೃಕ್ಷಗಳನ್ನು ಬೆಳೆಸಿ, ಇಡೀ ಪರಿಸರಕ್ಕೆ ಆಮ್ಲಜನಕ ಕೊಡುವಂತೆ ಮಾಡಿ, ವಿವಿಧ ಪಕ್ಷಿಗಳಿಗೆ ಆಶ್ರಯತಾಣವಾಗುವಂತೆ ನೋಡಿಕೊಳ್ಳಬೇಕಾಗಿದೆ. ಈ ಮೂಲಕ ಸಮಾಜಕ್ಕೆ ಮಾದರಿಯಾಗಬೇಕಾಗಿದೆ. ಹೀಗಾಗಿ, ಪರಿಸರ ವಿರೋಧಿಯಾಗಿರುವ ಪ್ರಸ್ತುತ ಯೋಜನೆಯನ್ನು ಕೂಡಲೇ ಕೈಬಿಡಬೇಕು.
ಡಾ. ಬಿ.ಆರ್.ವೆಂಕಟೇಶ್, ರು.ಲ.ಮಂಜುನಾಥ್,ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.