ADVERTISEMENT

ಎಲ್ಲರಿಗೂ ಅರಿವಿರಲಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2020, 19:45 IST
Last Updated 16 ಫೆಬ್ರುವರಿ 2020, 19:45 IST

ನಮ್ಮ ಸಂವಿಧಾನದ ಸಂಕ್ಷಿಪ್ತ ಮಾಹಿತಿ ಮೊದಲು ಪರಿಚಯವಾಗಬೇಕಾದುದು ಇಂದಿನ ವಿದ್ಯಾರ್ಥಿಗಳಿಗೆ. ಮುಂದೆ ನಮ್ಮನ್ನು ಮುನ್ನಡೆಸಬೇಕಾದವರು ಅವರೇ. ಕರ್ತವ್ಯ ಮತ್ತು ಹಕ್ಕುಗಳನ್ನು ಅದು ತಿಳಿಸಿಕೊಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಸಮಾನತೆಯನ್ನು ತಿಳಿಸಿಕೊಡುತ್ತದೆ.

ನಮ್ಮ ಜನಪ್ರತಿನಿಧಿಗಳು ಅನೇಕ ಸಂದರ್ಭಗಳಲ್ಲಿ ಬೇಜವಾಬ್ದಾರಿಯಿಂದ ವರ್ತಿಸುವುದನ್ನು ನೋಡುತ್ತೇವೆ. ವಿಷಯಾಧಾರಿತ ಚರ್ಚೆಗಳು ನಡೆದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರೆ ಅದೊಂದು ಒಳ್ಳೆಯ ಬೆಳವಣಿಗೆ. ಆದರೆ ಹಾಗಾಗುತ್ತಿಲ್ಲ. ಭಾರತದಲ್ಲಿ ಎಲ್ಲರೂ ಅನುಸರಿಸುವ ಏಕಮಾತ್ರ ಧರ್ಮ ಅಂದರೆ ಸಂವಿಧಾನ.

ಸಂವಿಧಾನ ಕಲಿಕೆಯು ಎಲ್ಲಾ ಹಂತಗಳಲ್ಲೂ ಪಠ್ಯರೂಪದಲ್ಲಿ ಸಿಗುವಂತಾದರೆ, ಅದರಲ್ಲೂ ವಿದ್ಯಾರ್ಥಿಗಳಿಗೆ ಸಂವಿಧಾನದ ಪೂರ್ಣ ಪರಿಚಯವಾದರೆ, ಅವರು ಮುಂದೆ ದೊಡ್ಡವರಾಗಿ ರಾಜಕೀಯ ರಂಗ ಪ್ರವೇಶಿಸಿದರೆ, ಅವರಿಗೆ ಅವರ ಹಕ್ಕು ಮತ್ತು ಕರ್ತವ್ಯದ ಬಗ್ಗೆ ಹೆಚ್ಚು ಮಾಹಿತಿ ದೊರೆತಂತಾಗುತ್ತದೆ. ಸಂವಿಧಾನ ಕಲಿಕೆಯು ಬರೀ ಕಾನೂನು ವಿದ್ಯಾರ್ಥಿಗಳಿಗೆ ಸೀಮಿತವಾಗಬಾರದು. ಪ್ರತಿಯೊಬ್ಬ ಭಾರತೀಯನೂ ಸಂವಿಧಾನದ ಬಗ್ಗೆ ಕನಿಷ್ಠ ತಿಳಿವಳಿಕೆ ಹೊಂದಿರಬೇಕು.

ADVERTISEMENT

-ಎ.ಎಸ್‌. ಗೋಪಾಲಕೃಷ್ಣ,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.