ADVERTISEMENT

ಮೂಢನಂಬಿಕೆಗೆ ಶಿಕ್ಷೆ: ಆತ್ಮಾವಲೋಕನ ಆಗಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 29 ಸೆಪ್ಟೆಂಬರ್ 2020, 15:32 IST
Last Updated 29 ಸೆಪ್ಟೆಂಬರ್ 2020, 15:32 IST

ಹೊಳಲ್ಕೆರೆ ತಾಲ್ಲೂಕಿನ ಅಜ್ಜಿ ಕ್ಯಾತನಳ್ಳಿಯಲ್ಲಿ ದೆವ್ವ ಬಿಡಿಸುವುದಾಗಿ ಹೇಳಿ ಬಾಲಕಿಯನ್ನು ಪೂಜಾರಿಯೊಬ್ಬರು ಕೋಲಿನಿಂದ ಹೊಡೆದು ಸಾಯಿಸಿರುವುದನ್ನು ತಿಳಿದು (ಪ್ರ.ವಾ., ಸೆ. 28) ಮನಸ್ಸಿಗೆ ತುಂಬಾ ನೋವಾಯಿತು. ಜನರಲ್ಲಿ ಎಷ್ಟು ಜಾಗೃತಿ ಮೂಡಿಸಿದರೂ ಮತ್ತದೇ ರೀತಿಯ ತಪ್ಪುಗಳು ನಡೆಯುತ್ತಿವೆ.

ಕೆಲವು ಪೂಜಾರಿಗಳು ಮತ್ತು ಮಂತ್ರವಾದಿಗಳು ಜನರಲ್ಲಿ ಇಲ್ಲಸಲ್ಲದ ಭಯ ಮೂಡಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಸರ್ಕಾರವು ಮೂಢನಂಬಿಕೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದರೂ ಅದನ್ನು ಕಟ್ಟುನಿಟ್ಟಾಗಿ ಪಾಲಿಸದಿರುವುದೇ ಇಂತಹ ವಿದ್ಯಮಾನಗಳಿಗೆ ಕಾರಣ. ಕಾಯ್ದೆ ಜಾರಿಗೊಳಿಸಿದಾಗಿನಿಂದಲೂ ಎಷ್ಟು ಜನರಿಗೆ ಶಿಕ್ಷೆ ನೀಡಲಾಗಿದೆ ಎನ್ನುವ ಬಗ್ಗೆ ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳಲಿ.

ರಾಜು ಬಿ. ಲಕ್ಕಂಪುರ, ಜಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.