ADVERTISEMENT

ಕಬಡ್ಡಿಗೆ ಸಿಗಲಿ ಪ್ರೋತ್ಸಾಹ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2019, 18:07 IST
Last Updated 15 ಆಗಸ್ಟ್ 2019, 18:07 IST

ಅಪ್ಪಟ ದೇಸಿ ಆಟವಾದ ಕಬಡ್ಡಿಯನ್ನು ಆಡುವುದರಿಂದ ಸಿಗುವ ಪ್ರಯೋಜನಗಳು ಹಲವಾರು. ಈ ಗುಂಪು ಆಟವು ಆಟಗಾರರ ದೈಹಿಕ ಕ್ಷಮತೆ, ಮನೋಬಲ ಹೆಚ್ಚಿಸಿ, ಒಗ್ಗಟ್ಟಿನ ಪಾಠವನ್ನೂ ಕಲಿಸುತ್ತದೆ. ವೀಕ್ಷಕರಿಗೆ ಸಕಾರಾತ್ಮಕ ಮನರಂಜನೆಯನ್ನು ಒದಗಿಸುತ್ತದೆ. ಪ್ರೊ ಕಬಡ್ಡಿ ಲೀಗ್‌ನ ಏಳನೇ ಆವೃತ್ತಿ ಈಗ ಭಾರತದಲ್ಲಿ ನಡೆಯುತ್ತಿದೆ. ಇದರಲ್ಲಿ ವಿದೇಶಿ ಆಟಗಾರರೂ ಭಾಗವಹಿಸುತ್ತಿರುವುದು ಕಬಡ್ಡಿಯ ಜನಪ್ರಿಯತೆಗೆ ಸಾಕ್ಷಿ.

ಆದಾಗ್ಯೂ ನಮ್ಮ ಮಾಧ್ಯಮಗಳು ಕಬಡ್ಡಿಗೆ ಹೆಚ್ಚಿನ ಪ್ರೋತ್ಸಾಹ, ಬೆಂಬಲ ನೀಡುತ್ತಿಲ್ಲ. ಕ್ರಿಕೆಟ್‌ನ ಸಣ್ಣಪುಟ್ಟ ಸಂಗತಿಗಳಿಗೂ ಹೆಚ್ಚಿನ ಪ್ರಚಾರ ನೀಡುವ ಮಾಧ್ಯಮಗಳು, ಕಬಡ್ಡಿಯಂತಹ ಉತ್ತಮ ಆಟಗಳ ಬಗ್ಗೆಯೂ ಹೆಚ್ಚಿನ ಗಮನಹರಿ
ಸಬೇಕು. ಆಟದ ಬಗ್ಗೆ ಪರಿಪೂರ್ಣ ಮಾಹಿತಿ ಒದಗಿಸುವುದು, ಆಟಗಾರರು ಮತ್ತು ತಂಡದ ಮಾಲೀಕರ ಸಂದರ್ಶನ ನಡೆಸುವುದು ಈ ನಿಟ್ಟಿನಲ್ಲಿ ಸಹಕಾರಿ.

ಲಕ್ಷ್ಮೀನಾರಾಯಣ ಭಟ್ಟ ಕೆ.ಜಿ., ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.