ADVERTISEMENT

ವಾಚಕರ ವಾಣಿ: ಎಲ್ಲ ಹಾಡನ್ನೂ ಒಪ್ಪಲು ಸಾಧ್ಯವೇ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 10 ಜೂನ್ 2021, 19:30 IST
Last Updated 10 ಜೂನ್ 2021, 19:30 IST

‘ಇಂದಿನ ಚಿತ್ರಗೀತೆಗಳಲ್ಲಿ ಅರುಚಿಯೇ ಅಭಿರುಚಿಯಾದಂತಿದೆ’ ಎಂಬ ಡಾ. ದೊಡ್ಡರಂಗೇಗೌಡ ಅವರ ಅಭಿಪ್ರಾಯಕ್ಕೆ (ಸಂಗತ, ಮೇ 28) ‘ಚಿತ್ರಗೀತೆಗಳಲ್ಲಿ ಹೊಸ ಪ್ರಯೋಗಗಳೆಲ್ಲ ಅರುಚಿ ಅಲ್ಲ’ ಎಂದು ಸುಗ್ಗನಹಳ್ಳಿ ಷಡಕ್ಷರಿ ಪ್ರತಿಕ್ರಿಯಿಸಿದ್ದಾರೆ (ವಾ.ವಾ., ಜೂನ್ 10). ಈ ಅಭಿಪ್ರಾಯವನ್ನು ನಾನು ನಿರಾಕರಿಸುತ್ತೇನೆ. ಅಲ್ಲದೆ, ಚಿತ್ರಗೀತೆಗಳಲ್ಲಿ ಹೊಸ ಪ್ರಯೋಗ ಬೇಡ ಎಂದು ದೊಡ್ಡರಂಗೇಗೌಡ ಅವರು ಹೇಳಿಲ್ಲ. ಬದಲಾಗಿ, ಇವತ್ತಿನ ಚಿತ್ರಗೀತೆಗಳಲ್ಲಿ ಮೌಲ್ಯಗಳಿಲ್ಲ ಎಂದಿದ್ದಾರೆ.

ಸಮಾಜಕ್ಕೆ ಸಂದೇಶವಾಹಿನಿ ಆಗುವ ಚಿತ್ರಗೀತೆಗಳಲ್ಲಿ ಈಗ ಕೀಳು ಅಭಿರುಚಿಗಳು ಹೆಚ್ಚು ಧ್ವನಿಸುತ್ತಿವೆ. ಅಪರೂಪವಾಗಿ ಯಾವುದೋ ಒಂದು ಒಳ್ಳೆಯಗೀತೆ ಸಿಕ್ಕ ಮಾತ್ರಕ್ಕೆ ಈಗಿನ ಎಲ್ಲ ಹಾಡುಗಳನ್ನೂ ಒಪ್ಪಿಕೊಳ್ಳಲು ಸಾಧ್ಯವೇ? ಸಾಕಷ್ಟು ಗದ್ಯಮಯವಾದ, ಪ್ರಾಸಕ್ಕಾಗಿ ಅಪಭ್ರಂಶ ತರುವ, ಸತ್ವ ಇಲ್ಲದೆ ಬರೀ ಟೊಳ್ಳಾಗಿ ಕಾಣಿಸುವ ಗೀತೆಗಳು ಹಿಂದಿನ ಮೌಲಿಕ ಗೀತೆಗಳಿಗೆ ಸಮವೇ? ಚಿತ್ರರಂಗದ ಹೊಸಬರಿಂದಲೂ ತಮ್ಮ ಸೃಜನಶೀಲತೆ, ಕ್ರಿಯಾಶೀಲತೆಯಿಂದ ಸಮಾಜಕ್ಕೆ ಒಳ್ಳೆಯದನ್ನು ಕೊಡಲು ಸಾಧ್ಯವಿದೆ ಅಲ್ಲವೇ?

–ಡಾ. ಡಿ.ಭರತ್, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.