ADVERTISEMENT

ಬಳಕೆಯ ಸಾಧ್ಯತೆ ಹಿಗ್ಗಿಸೋಣ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 6 ಡಿಸೆಂಬರ್ 2020, 19:30 IST
Last Updated 6 ಡಿಸೆಂಬರ್ 2020, 19:30 IST

‘ಕನ್ನಡ ಮಾತನಾಡುವವರ ಸಂಖ್ಯೆ ಹೆಚ್ಚಾಗಬೇಕಾದಲ್ಲಿ ಕನ್ನಡೇತರರಿಗೆ ಕನ್ನಡ ಕಲಿಸುವ ಕೆಲಸವಾಗಬೇಕು...’ ಎಂದು ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ ಇತ್ತೀಚೆಗೆ ಹೇಳಿರುವುದು ಸಾಮಾನ್ಯವಾಗಿ ಎಲ್ಲರೂ ಹೇಳುವ ಲಘು ಲಹರಿಯ ಮಾತೇ ವಿನಾ ಇದರಲ್ಲಿ ಯಾವುದೇ ಯಥಾರ್ಥತೆ ಕಂಡುಬರುವುದಿಲ್ಲ. ಏಕೆಂದರೆ, ಕನ್ನಡಿಗರಿಗೆ ಕನ್ನಡ ಕಲಿಸುವುದರಲ್ಲಿಯೇ ಹೀನಾಯವಾಗಿ ಸೋತಿರುವ ಪ್ರಸ್ತುತ ಸಂದರ್ಭದಲ್ಲಿ, ಇತರರಿಗೆ ಕನ್ನಡ ಕಲಿಸುವ ಕೆಲಸ ಆಗಬೇಕೆಂಬುದು ಬುಡ ಇಲ್ಲದ ಹೇಳಿಕೆಯಂತಾಗುತ್ತದೆ.

ಕನ್ನಡಿಗರೆಲ್ಲರೂ ಬಹುಪಾಲು ತಮ್ಮೆಲ್ಲ ವ್ಯವಹಾರಗಳನ್ನು ಕನ್ನಡದಲ್ಲಿಯೇ ನಡೆಸಬೇಕು. ಉದಾಹರಣೆಗೆ, ಮಾತನಾಡುವುದು, ಅರ್ಜಿ ಬರೆಯುವುದು, ಪತ್ರ ವ್ಯವಹಾರ, ಬ್ಯಾಂಕ್‌ನಲ್ಲಿ ಚೆಕ್‌– ಚಲನ್‌ಗಳನ್ನು ಬರೆಯುವುದು, ಇ– ಮೇಲ್‌, ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡದ ಬಳಕೆ, ಮನೆಗೆ ಕನ್ನಡ ದಿನಪತ್ರಿಕೆ ತರಿಸಿಕೊಳ್ಳುವುದು, ಖಾಸಗಿ ಕಚೇರಿಗಳಲ್ಲೂ ನಮ್ಮ ಭಾಷೆಯನ್ನೇ ಬಳಸುವುದು- ಹೀಗೆಲ್ಲ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ನಯವಾಗಿಯೇ ಕನ್ನಡವನ್ನು ಆತ್ಮವಿಶ್ವಾಸದಿಂದ ಬಳಸಬೇಕು. ಆಗ ತನಗೆ ತಾನೇ ಇತರರೂ ಕನ್ನಡ ಕಲಿಯುವಂತೆ ಆಗುತ್ತದೆ. ಅದಕ್ಕೆ ತಮಿಳುನಾಡು ಒಳ್ಳೆಯ ಉದಾಹರಣೆಯಾದೀತು!

- ಪು.ಸೂ.ಲಕ್ಷ್ಮೀನಾರಾಯಣ ರಾವ್,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.