ADVERTISEMENT

ಇನ್ನಾದರೂ ಚರ್ಚೆ ನಡೆಯಲಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2021, 19:30 IST
Last Updated 19 ಡಿಸೆಂಬರ್ 2021, 19:30 IST

ಬೆಳಗಾವಿಯಲ್ಲಿ ಇದೇ 13ರಂದು ವಿಧಾನಮಂಡಲ ಅಧಿವೇಶನ ಆರಂಭವಾಗಿದ್ದರೂ ಜನಸಾಮಾನ್ಯರ ಬವಣೆಗಳು, ಉತ್ತರ ಕರ್ನಾಟಕದ ಹಲವು ಜ್ವಲಂತ ಸಮಸ್ಯೆಗಳ ಕುರಿತು ಅರ್ಥಪೂರ್ಣ ಚರ್ಚೆಗಳೇ ನಡೆದಿಲ್ಲ. ಸಮಸ್ಯೆಯ ಎಲ್ಲ ಆಯಾಮಗಳ ಕುರಿತು ವಿವರವಾಗಿ ಚರ್ಚಿಸಲು ಸದನ ಅತ್ಯುತ್ತಮ ವೇದಿಕೆ. ಇದನ್ನು ಮರೆತು ಆಡಳಿತ ಮತ್ತು ವಿರೋಧ ಪಕ್ಷಗಳ ಕಡೆಯವರು ಬರೀ ಬೊಬ್ಬೆ, ಗದ್ದಲ, ಚೀರಾಟಗಳಲ್ಲಿ ಮೈಮರೆತರೆ ನಮ್ಮ ತೆರಿಗೆ ಹಣಕ್ಕೆ ನ್ಯಾಯ ದೊರೆಯುವುದಾದರೂ ಹೇಗೆ? ಅಧಿವೇಶನದ ಇನ್ನುಳಿದ ದಿನಗಳನ್ನಾದರೂ ಸದುಪಯೋಗಪಡಿಸಿಕೊಳ್ಳಬೇಕು. ಎರಡೂ ಕಡೆಯವರು ತಮ್ಮ ಪ್ರತಿಷ್ಠೆಯನ್ನು ಒತ್ತಟ್ಟಿಗಿರಿಸಿ, ಹಲವು ಸಮಸ್ಯೆಗಳಿಂದ ಬಳಲಿರುವ ಪ್ರಜೆಗಳಿಗೆ ಪರಿಹಾರ ಒದಗಿಸಬಲ್ಲರೇ?

-ಕೆ.ಶ್ರೀನಿವಾಸ ರಾವ್, ಹರಪನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT