ADVERTISEMENT

ವಾಚಕರ ವಾಣಿ: ಗಡಿ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ಸಿಗಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 23 ಫೆಬ್ರುವರಿ 2022, 19:31 IST
Last Updated 23 ಫೆಬ್ರುವರಿ 2022, 19:31 IST

ಕರ್ನಾಟಕ ಗಡಿ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಗಡಿ ಭಾಗದ ಹಾಗೂ ಕರ್ನಾಟಕಕ್ಕೆ ಹೊಂದಿಕೊಂಡಂತೆ ಇರುವ ಆರು ನೆರೆರಾಜ್ಯಗಳ ಕನ್ನಡಿಗರ ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ ಮತ್ತು ಆರ್ಥಿಕ ವಿಶೇಷ ಅವಶ್ಯಕತೆಗಳನ್ನು ಪೂರೈಸುವ ಮಹತ್ವಾಕಾಂಕ್ಷೆಯಿಂದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು 2010ರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಗಡಿಗೆ ಹೊಂದಿಕೊಂಡಂತೆ ಇರುವ ರಾಜ್ಯದ ಹಾಗೂ ಹೊರರಾಜ್ಯದ ಗಡಿ ಭಾಗದಲ್ಲಿ ಅವಶ್ಯವಿರುವಷ್ಟು ಕನ್ನಡ ಶಾಲೆಗಳನ್ನು ತೆರೆಯುವುದು, ನೆರೆ ರಾಜ್ಯಗಳಲ್ಲಿ ಮುಚ್ಚಿರುವ ಕನ್ನಡ ಶಾಲೆಗಳನ್ನು ತೆರೆದು ಅಲ್ಲಿ ಕನ್ನಡ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಿ, ಅಗತ್ಯವಾದ ಶಾಲಾ ಕಟ್ಟಡಗಳನ್ನು ನಿರ್ಮಾಣ ಮಾಡುವುದು, ಕನ್ನಡ ಶಿಕ್ಷಣ ನೀಡಲು ಅಗತ್ಯವಾದ ಶಿಕ್ಷಕರನ್ನು ನೇಮಕ ಮಾಡುವಂತಹ ಕಾರ್ಯವನ್ನು ಪ್ರಾಧಿಕಾರ ನಿರ್ವಹಿಸಲು ಅವಕಾಶವಿದೆ. ಜವಾಬ್ದಾರಿ ಹೆಚ್ಚಿದ್ದರೂ ಕಳೆದ 10 ವರ್ಷಗಳಲ್ಲಿ ಕೇವಲ ₹ 241 ಕೋಟಿ ಅನುದಾನ ನೀಡಿರುವುದು ಗಡಿನಾಡಿನ ಕನ್ನಡಿಗರಿಗೆ ತುಂಬಾ ಆಘಾತವುಂಟುಮಾಡುವ ವಿಷಯವಾಗಿದೆ.

ಪ್ರಾಧಿಕಾರಗಳಿಗೆ ಅನುದಾನದ ಪ್ರಮಾಣ ನಿರ್ಧರಿಸುವ ಇಲಾಖೆ ಇದುವರೆಗೂ ಗಡಿ ಪ್ರಾಧಿಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಿಗೆ ನಿರುತ್ಸಾಹದ ಪ್ರತಿಕ್ರಿಯೆ ತೋರುತ್ತಿರುವುದು ತುಂಬಾ ವಿಷಾದದ ಸಂಗತಿ. ಈ ಬಗ್ಗೆ ಮುಖ್ಯಮಂತ್ರಿ ಗಮನ ಹರಿಸಬೇಕು. ಗೋವಾ, ಮಹಾರಾಷ್ಟ್ರ ಮತ್ತು ಕೇರಳದ ಗಡಿ ಭಾಗದ ಕನ್ನಡಿಗರ ಆಶೋತ್ತರಗಳನ್ನು ಈಡೇರಿಸಲು ಈ ರಾಜ್ಯಗಳಿಗೆ ಕರ್ನಾಟಕ ಸರ್ಕಾರವು ಒಂದು ವಿಶೇಷ ಪ್ಯಾಕೇಜನ್ನು ಘೋಷಿಸುವುದು ಸೂಕ್ತ. ಜೊತೆಗೆ ಇನ್ನಿತರ ರಾಜ್ಯಗಳ ಮತ್ತು ಕರ್ನಾಟಕದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಒಳಗಿನ 1,000 ಹಳ್ಳಿಗಳನ್ನು ಒಳಗೊಂಡಂತೆ 63 ಗಡಿ ತಾಲ್ಲೂಕುಗಳನ್ನು ಒಳಗೊಂಡ ನಾಡಿನ ಗಡಿ ಪ್ರದೇಶದ ಅಭಿವೃದ್ಧಿಗೆ ಕನಿಷ್ಠ ₹ 300 ಕೋಟಿ ಅನುದಾನವನ್ನು ಗಡಿ ಪ್ರದೇಶ ಪ್ರಾಧಿಕಾರಕ್ಕೆ ಬಿಡುಗಡೆ ಮಾಡುವುದು ಸೂಕ್ತ.

–ಡಾ.ಹಂಪ ನಾಗರಾಜಯ್ಯ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.