ADVERTISEMENT

ದುರಾಸೆ ತರವಲ್ಲ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2019, 18:11 IST
Last Updated 11 ಆಗಸ್ಟ್ 2019, 18:11 IST

ಪ್ರವಾಹಪೀಡಿತ ಪ್ರದೇಶಗಳ ಸುತ್ತಮುತ್ತಲಿನ ಕೆಲವು ವ್ಯಾಪಾರಸ್ಥರು, ನೆರೆಯಿಂದ ಸಂಕಷ್ಟಕ್ಕೆ ಸಿಲುಕಿದವರು ದಿನಸಿ ಖರೀದಿಗೆ ಬಂದರೆ ಮನಬಂದಂತೆ ಬೆಲೆ ಪಡೆಯುತ್ತಾ ಅವರ ಅಸಹಾಯಕ ಪರಿಸ್ಥಿತಿಯ ಲಾಭ ಪಡೆಯುತ್ತಿದ್ದಾರೆ (ಪ್ರ.ವಾ., ಆ. 11). ಸಂಕಷ್ಟದಲ್ಲಿ ಇರುವವರು ಅಂಗಡಿಗೆ ಬಂದರೆ ಅವರ ಕುರಿತು ಮರುಕ ವ್ಯಕ್ತಪಡಿಸಬೇಕು.

ನಷ್ಟ ಮಾಡಿಕೊಂಡು ದಿನಸಿ ಕೊಡಿ ಎಂದು ಹೇಳಲಿಕ್ಕೆ ಆಗದಿದ್ದರೂ ಕೊನೇಪಕ್ಷ ಆ ವಸ್ತುವಿನ ಬೆಲೆ ಎಷ್ಟೋ ಅಷ್ಟನ್ನು ಪಡೆಯುವುದು ಮಾನವೀಯತೆ. ಇಂತಹ ಸಂದರ್ಭದಲ್ಲೂ ಅತಿಯಾದ ಲಾಭಕ್ಕೆ ಆಸೆಪಡುವುದು ವ್ಯಾಪಾರ ಅನ್ನಿಸಿಕೊಳ್ಳುವುದಿಲ್ಲ.

ಮಾರುತಿ ಮೋಶಿ, ಕರಡಿಗುಡ್ಡ ಎಸ್.ಎನ್, ಬಾದಾಮಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.