ADVERTISEMENT

ಹತಾಶ ನಾಯಕರ ಬಾಲಿಶ ಹೇಳಿಕೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 12 ಜುಲೈ 2021, 19:30 IST
Last Updated 12 ಜುಲೈ 2021, 19:30 IST

ಚಿಕ್ಕಂದಿನಲ್ಲಿ ಹಿರಿಯರು ಮಕ್ಕಳಿಗೆ ಹುರಿದುಂಬಿಸುತ್ತಾ, ‘ಮುಂದೆ ಡಾಕ್ಟರ್ ಆಗಬೇಕು’, ‘ಎಂಜಿನಿಯರ್ ಆಗಬೇಕು’, ‘ಐಎಎಸ್ ಆಫೀಸರ್ ಆಗಬೇಕು’... ಅದಕ್ಕಾಗಿ ಹೆಚ್ಚಾಗಿ ಓದಿನ ಕಡೆ ಗಮನ ಕೊಡಬೇಕು ಎಂದೆಲ್ಲ ಹೇಳಿ ಉತ್ತೇಜಿಸುತ್ತಾರೆ. ಹೀಗಿರುವಾಗ, ಕಾಂಗ್ರೆಸ್‌ನ ಹಿರಿಯ ನಾಯಕ ಧ್ರುವನಾರಾಯಣ್ ಅವರು ‘ಕಾಂಗ್ರೆಸ್ ಅಧಿಕಾರಕ್ಕೆ ಆಸೆಪಡುವ ಪಕ್ಷ ಅಲ್ಲ’ (ಪ್ರ.ವಾ., ಜುಲೈ 12) ಎಂದು ಹೇಳಿರುವುದು ಬಾಲಿಶ. ಪಕ್ಷದಲ್ಲೂ ಕಾರ್ಯಕರ್ತರನ್ನು ಹುರಿದುಂಬಿಸಿ ‘ಜನರ ಅವಶ್ಯಕತೆಗೆ ಸ್ಪಂದಿಸಿದರೆ ನಾಯಕನಾಗಬಹುದು’ ಎಂದು ಹೇಳದಿದ್ದರೆ, ಕಾರ್ಯಕರ್ತರೂ ಈ ‘ಹತಾಶ’ ನಾಯಕರಂತೆ ಆಸಕ್ತಿ ಕಳೆದುಕೊಳ್ಳುತ್ತಾರೆ.

ಈ ತರಹದ ಬಾಲಿಶ ಮಾತುಗಳಿಂದಲೇ, ಜನರಿಗೆ ಕಾಂಗ್ರೆಸ್ ಬದಲು ಟಿಎಂಸಿ, ಎಎಪಿ ಪಕ್ಷಗಳು ಆಶಾದಾಯಕವಾಗಿ ಕಾಣುತ್ತಿವೆ. ಮುಂದಿನ ವರ್ಷಗಳಲ್ಲಿ ನಡೆಯಲಿರುವ ಚುನಾವಣೆಗೆಬಿಜೆಪಿ ಎಲ್ಲ ತಯಾರಿ ನಡೆಸುತ್ತಿದೆ. ಆದರೆ, ಕಾಂಗ್ರೆಸ್ ನಾಯಕತ್ವಕ್ಕೆ, ಪಕ್ಷದ ಅಧ್ಯಕ್ಷ ಸ್ಥಾನ ‘ಹಿಡಿದಿಟ್ಟುಕೊಳ್ಳುವ’ ಬಗ್ಗೆ, ಪಕ್ಷದ ಘಟಾನುಘಟಿ ಪ್ರಬುದ್ಧರನ್ನು ಪಂಜರದ ಗಿಣಿಗಳಂತೆ ಇಟ್ಟು ನೇಪಥ್ಯಕ್ಕೆ ತಳ್ಳುವುದರ ಬಗ್ಗೆಯೇ ಆಸಕ್ತಿ. ಪಕ್ಷವನ್ನು ಬಲಪಡಿಸಬೇಕೆಂಬ ಚರ್ಚೆಯನ್ನು ಉದ್ದೇಶಪೂರ್ವಕವಾಗಿ ಮುಂದೂಡಲಾಗುತ್ತಿದೆ. ದುರಂತವೆಂದರೆ, ಪ್ರಬುದ್ಧರ ಬದಲು, ಕಾಂಗ್ರೆಸ್ ಪಕ್ಷದ ‘ಎರಡನೇ ಸಾಲಿನ ವಕ್ತಾರರು’ ನಾಯಕರಂತೆ ಮಿಂಚುತ್ತಿದ್ದಾರೆ. ಹಿರಿಯ ವಾಗ್ಮಿಗಳು, ಪ್ರಬುದ್ಧರನ್ನು ನೇಪಥ್ಯಕ್ಕೆ ಸರಿಸಿರುವುದರಿಂದ, ಕಾಂಗ್ರೆಸ್ಸಿಗೆ ಬೆಲೆ ಇಲ್ಲದಾಗಿದೆ ಎಂಬುದು ಅರಿವಾಗಿಲ್ಲ. ಈ ಸ್ಥಿತಿಯಲ್ಲಿ ಪಕ್ಷವು ಮುಂದೆ ಅಧಿಕಾರ ಪಡೆಯುವುದು ಭ್ರಮೆಯೆಂದು ತಿಳಿದು ಪಕ್ಷದವರೇ ಬೇರೆ ಪಕ್ಷಗಳಿಗೆ ಧಾವಿಸುತ್ತಿದ್ದಾರೆ. ಕಾಂಗ್ರೆಸ್‌ನ ಸ್ವಾರ್ಥ ನಾಯಕತ್ವದ ಕಾರಣ, ರಾಜ್ಯಗಳ ನಾಯಕರ ಮೇಲೆ ಹತೋಟಿ ಇಲ್ಲದಾಗಿದೆ.

- ಪಿ.ಸಿ.ಕೇಶವ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.