ADVERTISEMENT

ಸಮರ್ಪಕ ಅನುಷ್ಠಾನ ಮುಖ್ಯ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2019, 21:12 IST
Last Updated 14 ನವೆಂಬರ್ 2019, 21:12 IST

ರಾಜ್ಯದ ಪ್ರವಾಸೋದ್ಯಮಕ್ಕೆ ಹೊಸ ದಿಕ್ಕು ನೀಡುವುದಾಗಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರು ಫೋನ್- ಇನ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ (ಪ್ರ.ವಾ., ನ. 13). ಈ ಸಂಬಂಧ ಸಚಿವರ ಬಳಿ ಹಲವಾರು ಉತ್ತಮ ಯೋಜನೆಗಳು ಇರಬಹುದು. ಆದರೆ ಅವು ಅನುಷ್ಠಾನಕ್ಕೆ ಬರುವಾಗ ಆಗಬಹುದಾದ ಲೋಪದೋಷ ಹಾಗೂ ಭ್ರಷ್ಟಾಚಾರವನ್ನು ಎಚ್ಚರಿಕೆಯಿಂದ ತಡೆಗಟ್ಟಬೇಕು.

ಮಕ್ಕಳಿಗೆ ವಿತರಿಸುವ ಹಾಲಿನ ಪುಡಿಯಿಂದ ಹಿಡಿದು ಸಾರ್ವಜನಿಕ ಶೌಚಾಲಯ ನಿರ್ಮಾಣದವರೆಗೆ ಹಲವಾರು ಯೋಜನೆಗಳ ಹಣವನ್ನು ನುಂಗಿ ನೀರು ಕುಡಿಯುವ ವ್ಯವಸ್ಥಿತ ಜಾಲವೇ ನಮ್ಮಲ್ಲಿದೆ. ಪ್ರವಾಸಿ ತಾಣಗಳ ಅಭಿವೃದ್ಧಿ ಯೋಜನೆ ಅಂತಹವರ
ಕೈಗೆ ಸಿಲುಕದಿರಲಿ. ಖಾಸಗಿ ಸಹಭಾಗಿತ್ವದ ಕಡೆ ಎಚ್ಚರಿಕೆ ಅಗತ್ಯ.

ನಮ್ಮ ಹಲವು ಪ್ರವಾಸಿ ತಾಣಗಳಲ್ಲಿ ಕುಡಿಯುವ ನೀರು, ಶೌಚಾಲಯ, ಉಪಾಹಾರ ಗೃಹದಂತಹ ಮೂಲ ಸೌಲಭ್ಯಗಳ ಕೊರತೆಯಿದೆ. ಕೆಲವು ಪ್ರೇಕ್ಷಣೀಯ ಸ್ಥಳಗಳಲ್ಲಿ ಅನುಭವಿ ಗೈಡ್‌ಗಳು ಇಲ್ಲ. ಮೊದಲು ಈ ಕೊರತೆಗಳನ್ನು ನೀಗಿಸುವತ್ತ ಗಮನಹರಿಸಬೇಕು. ನಂತರ ಹೊಸ ಪ್ರವಾಸಿ ತಾಣಗಳ ಗುರುತಿಸುವಿಕೆ ಬಗ್ಗೆ ಚಿಂತನೆ ನಡೆಸಲಿ. ಇದರ ಜತೆಯಲ್ಲಿ, ಇಲಾಖೆಯಲ್ಲಿನ ಖಾಲಿ ಹುದ್ದೆಗಳ ಭರ್ತಿಗೂ ಸಚಿವರು ಕೂಡಲೇ ಮುಂದಾಗಬೇಕು.

ADVERTISEMENT

-ಎಸ್. ನಾಗರಾಜನಾಗೂರ, ಬಾಗಲಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.