ADVERTISEMENT

ವಾಚಕರ ವಾಣಿ: ಮಹಿಳಾ ಜಯಂತಿ ಆಚರಣೆ ಯಾಕಿಲ್ಲ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 25 ಫೆಬ್ರುವರಿ 2022, 19:30 IST
Last Updated 25 ಫೆಬ್ರುವರಿ 2022, 19:30 IST

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಈ ವರ್ಷದಿಂದ ಹೆಚ್ಚುವರಿಯಾಗಿ ಐವರ ಜಯಂತಿ ಆಚರಿಸುವ ನಿರ್ಧಾರ ಪ್ರಕಟಿಸಿದ್ದಾರೆ. ಸಂತೋಷ, ಆದರೆ ಕನ್ನಡ ನಾಡಿನಲ್ಲಿ ನಡೆಯುವ ಜಯಂತಿ ಆಚರಣೆಗಳಲ್ಲಿ ಯಾವೊಬ್ಬ ಮಹಿಳೆಯ ಜಯಂತಿ ಆಚರಣೆ ಇಲ್ಲದಿರುವುದು ವಿಷಾದನೀಯ. ಬದಲಾವಣೆಯ ಹರಿಕಾರನಾಗಬೇಕೆಂಬ ಉತ್ಸಾಹದಲ್ಲಿರುವ ಕಸಾಪ ಅಧ್ಯಕ್ಷರಿಗೂ ಕನ್ನಡ ನಾಡು ನುಡಿಗಾಗಿ ದುಡಿದ ಒಬ್ಬ ಸಾಧಕಿಯ ನೆನ‍ಪೂ ಆಗಲಿಲ್ಲವೇ?! ಕೇವಲ ಬಾಯಿಮಾತಿನ ಸಮಾನತೆಯಲ್ಲೇ ತೃಪ್ತಿಪಟ್ಟುಕೊಂಡು, ಸಾಧನೆಯ ಶಿಖರವನ್ನೇರಿದ್ದರೂ ಮೂಲೆಗುಂಪಾಗಿರುವ ಮಹಿಳೆಯರಿಗೆ ನ್ಯಾಯ ಸಿಗುವುದಾದರೂ ಯಾವಾಗ?

-ಸುಮಾ ರಮೇಶ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT