ADVERTISEMENT

ಚಿನ್ನ ಅಲ್ಲ ಅನ್ನ

ಸಿ.ಪಿ.ನಾಗರಾಜ
Published 29 ಏಪ್ರಿಲ್ 2019, 18:30 IST
Last Updated 29 ಏಪ್ರಿಲ್ 2019, 18:30 IST

‘ನಾಗಾರಾಧನೆಗೆ ಪ್ರಸಿದ್ಧಿ ಪಡೆದಿರುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ₹ 80 ಕೋಟಿ ವೆಚ್ಚದಲ್ಲಿ ನೂತನ ಚಿನ್ನದ ರಥ ನಿರ್ಮಾಣ ಪ್ರಕ್ರಿಯೆಯನ್ನು ತಕ್ಷಣದಿಂದಲೇ ಆರಂಭಿಸಲು ರಾಜ್ಯ ಸರ್ಕಾರ ಮುಂದಾಗಿದೆ’ ಎಂಬ ವರದಿಯನ್ನು ಓದಿ (ಪ್ರ.ವಾ., ಏ.29) ಹೊಟ್ಟೆಗೆ ಬೆಂಕಿ ಬಿದ್ದಂತಾಯಿತು.

ಏಕೆಂದರೆ, ಪ್ರಜಾಪ್ರಭುತ್ವ ಸರ್ಕಾರವು ಜನಸಮುದಾಯದ ದಿನನಿತ್ಯದ ಅಗತ್ಯಗಳಾದ ಅನ್ನ, ಬಟ್ಟೆ, ವಸತಿ, ವಿದ್ಯೆ, ಉದ್ಯೋಗ, ಆರೋಗ್ಯಕ್ಕೆ ಸಂಬಂಧಪಟ್ಟ ಕೆಲಸಗಳನ್ನು ಮಾಡಬೇಕು. ಅದು ಬಿಟ್ಟು ದೇವರನ್ನು ಹೊತ್ತು ಮೆರೆಸಲು ಚಿನ್ನದ ರಥವನ್ನು ನಿರ್ಮಿಸುವುದಲ್ಲ. ದೇವರಲ್ಲಿ ಮಾನವರು ಇಡುವ ಭಕ್ತಿಯು ಅಂತರಂಗದಲ್ಲಿ ಇರಬೇಕೇ ಹೊರತು, ಬಹಿರಂಗದಲ್ಲಿ ಕಣ್ಣುಕುಕ್ಕುವ ಚಿನ್ನದಲ್ಲಿ ಇರಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT