ADVERTISEMENT

ಕೂರ್ಮಗಡ: ಅವಘಡ ತಪ್ಪಿಸಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2019, 19:45 IST
Last Updated 4 ಫೆಬ್ರುವರಿ 2019, 19:45 IST

ಕಾರವಾರಕ್ಕೆ ಸಮೀಪದ ಕೂರ್ಮಗಡ ದ್ವೀಪದಲ್ಲಿ ನರಸಿಂಹ ದೇವರ ಜಾತ್ರೆ ಮುಗಿಸಿಕೊಂಡು ಮರಳುತ್ತಿದ್ದ ದೋಣಿ ಇತ್ತೀಚೆಗೆ ಸಮುದ್ರದಲ್ಲಿ ಮುಳುಗಿ 16 ಜನ ಪ್ರಾಣ ತೆತ್ತರು. ಆ ಪುಟ್ಟ ದ್ವೀಪದಲ್ಲಿ ವರ್ಷಕ್ಕೊಮ್ಮೆ ಒಂದು ದಿನ ಮಾತ್ರ ಜಾತ್ರೆ ನಡೆಯುತ್ತದೆ. ಉಳಿದ ದಿನಗಳಲ್ಲಿ ಅದು ನಿರ್ಜನವೇ. ಜಾತ್ರೆ ದಿನ ಸೇರುವ ಅಪಾರ ಜನಸಂದಣಿಗೆ ಪಾರವೇ ಇಲ್ಲ. ಆದರೆ, ಈ ವೇಳೆ ನಡೆಯುವ ಅವಘಡಗಳನ್ನು ತಪ್ಪಿಸುವ ಬಗ್ಗೆ ಯಾರೂ ಗಂಭೀರವಾಗಿ ಯೋಚಿಸಿದಂತಿಲ್ಲ. ದೋಣಿ ಮಾಲೀಕರು ಸಹ ಜನರನ್ನು ಹತ್ತಿಸಿಕೊಳ್ಳುವ ಮುನ್ನ ಮುಂಜಾಗ್ರತಾ ಕ್ರಮವಾಗಿ ಇತಿಮಿತಿ, ಜೀವರಕ್ಷಕ ಜಾಕೆಟ್, ಜೀವವಿಮೆ ಮುಂತಾದವುಗಳನ್ನು ಪಾಲಿಸುವುದಿಲ್ಲ. ಕೂರ್ಮಗಡ ದ್ವೀಪದಲ್ಲಿ ಜಾತ್ರೆಯ ದಿನ ಭಕ್ತಾದಿಗಳಿಗೆ ಮಾತ್ರ ಪ್ರವೇಶ ದೊರೆಯಲಿ. ಇಲ್ಲವಾದರೆ ಸರ್ಕಾರ ದ್ವೀಪ ವನ್ನು ಪ್ರವಾಸೋದ್ಯಮ ಕೇಂದ್ರವಾಗಿ ರೂಪಿಸಿ ವರ್ಷವಿಡೀ ಜನರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಿ. ಆ ದ್ವೀಪದಲ್ಲಿರುವ ನರಸಿಂಹ ಮೂರ್ತಿಯ ಕೆಲವು ಅಂಶಗಳನ್ನು ನಗರದ ಇನ್ನಿತರ ಭಾಗಗಳಲ್ಲಿ ಮರುಪ್ರತಿಷ್ಠಾಪಿಸುವ ಬಗ್ಗೆಯೂ ಚಿಂತಿಸಬಹುದು.

–ಚಂದ್ರಕಾಂತ ನಾಮಧಾರಿ, ಅಂಕೋಲಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT