ADVERTISEMENT

ಮೌನ ಮುರಿದ ಅಡ್ವಾಣಿ

ರಮಾನಂದ ಶರ್ಮಾ, ಬೆಂಗಳೂರು
Published 7 ಏಪ್ರಿಲ್ 2019, 20:31 IST
Last Updated 7 ಏಪ್ರಿಲ್ 2019, 20:31 IST

ತಮ್ಮನ್ನು, ತಮ್ಮ ವಿಚಾರಧಾರೆಯನ್ನು, ಚಿಂತನೆಯನ್ನು ಒಪ್ಪದವರನ್ನು, ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಿಕಾರರನ್ನು ದೇಶದ್ರೋಹಿಗಳು ಎಂದು ಹಣೆಪಟ್ಟಿ ಕಟ್ಟುವ ಮತ್ತು ಅವರನ್ನು ವೈರಿಗಳೆಂದು ಬಿಂಬಿಸಿ ವಿರೋಧಿಸುವ ಟ್ರೆಂಡ್ ಇತ್ತೀಚೆಗೆ ಹೆಚ್ಚಾಗುತ್ತಿದೆ. ಇದನ್ನು ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಅವರು ವಿರೋಧಿಸಿರುವುದು ಸಮರ್ಥನೀಯವಾಗಿದೆ. ಇತ್ತೀಚೆಗೆ ಪಕ್ಷಾಂತರ ಮಾಡಿದ ಹಿರಿಯ ರಾಜಕಾರಣಿಯೊಬ್ಬರು ತಮ್ಮ ಧುರೀಣರೊಬ್ಬರನ್ನು ದೇಶಕ್ಕೆ ಹೋಲಿಸಿದ್ದನ್ನು, ಸೈನ್ಯವನ್ನು ತಮ್ಮ ನೇತಾರನ ಸೈನ್ಯವೆಂದು ಬಣ್ಣಿಸಿದ್ದನ್ನು ನೋಡಿದಾಗ, ತುರ್ತು ಪರಿಸ್ಥಿತಿ ಸಮಯದಲ್ಲಿ ಅಂದಿನ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಬರುವಾ ಅವರ ಹೇಳಿಕೆ ‘ಇಂದಿರಾ ಅಂದರೆ ಇಂಡಿಯಾ... ಇಂಡಿಯಾವೇ ಇಂದಿರಾ’ ಎಂಬುದು ನೆನಪಿಗೆ ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.