ADVERTISEMENT

ವಾಚಕರ ವಾಣಿ : ಆಂಬುಲೆನ್ಸ್‌ ಕೊರತೆ; ಪರ್ಯಾಯ ವ್ಯವಸ್ಥೆಯಾಗಲಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2021, 18:41 IST
Last Updated 25 ಏಪ್ರಿಲ್ 2021, 18:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊರೊನಾ ಕಾರಣದಿಂದ ಬೆಂಗಳೂರು ನಗರದಲ್ಲಿ ಈಗ ತಲೆದೋರಿರುವ ಆರೋಗ್ಯ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ತುರ್ತು ನಿಗಾ ಘಟಕಗಳಲ್ಲಿ (ಐಸಿಯು) ಹಾಸಿಗೆಗಳ ಕೊರತೆ, ಆಂಬುಲೆನ್ಸ್‌ಗಳ ಅಭಾವ ಈ ಎರಡೂ ಸಮಸ್ಯೆಗಳನ್ನು ಪರಿಗಣಿಸಿ ಒಂದು ಪರಿಹಾರ ಕಂಡುಕೊಳ್ಳಬಹುದಾದ ಸಾಧ್ಯತೆ ಇದೆ.

ಆಂಬುಲೆನ್ಸ್‌ಗಳನ್ನು ಸ್ಮಶಾನಕ್ಕೆ ಶವ ಸಾಗಿಸುವುದು ಹಾಗೂ ಅಲ್ಲಿ ಗಂಟೆಗಟ್ಟಲೆ ಕಾಯುವುದಕ್ಕಾಗಿ ಬಳಸುತ್ತಿರುವುದು ದುರ್ಬಳಕೆ ಅನ್ನಿಸುತ್ತದೆ. ಅದರ ಬದಲಿಗೆ ಶವ ಸಾಗಿಸಲು ಬೇರೆ ವ್ಯವಸ್ಥೆ ಮಾಡಿ, ಆಂಬುಲೆನ್ಸ್‌ಗಳನ್ನು ತುರ್ತು ಸೇವೆಗೆ ಮತ್ತು ಐಸಿಯು ಬೆಡ್‌ಗಳಾಗಿ ಬಳಸಬಹುದಲ್ಲವೇ? ಅಥವಾ ಸ್ಮಶಾನದಲ್ಲಿ ಟೋಕನ್ ಮಾದರಿಯಲ್ಲಿ ಶವ ಇಳಿಸಿ, ಆಂಬುಲೆನ್ಸ್ ಕೂಡಲೇ ಹಿಂದಿರುಗುವಂತೆ ಮಾಡಬಹುದಲ್ಲವೇ?
-ರಾಮಚೆಂದೆರ್ ಗಿರಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT