ADVERTISEMENT

ಶಾಸ್ತ್ರಿಯನ್ನು ಮರೆತರೇ?

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2018, 16:35 IST
Last Updated 2 ಅಕ್ಟೋಬರ್ 2018, 16:35 IST

ಮಹಾತ್ಮ ಗಾಂಧಿ ಈ ದೇಶದ ಮಹಾ ಚೇತನ. ಪ್ರತಿ ವರ್ಷವೂ ಅವರನ್ನು ಸ್ಮರಿಸಿಕೊಳ್ಳುವುದು ಕರ್ತವ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ.

ಗಾಂಧಿ ಹುಟ್ಟಿದ ದಿನಾಂಕದಂದೇ ಲಾಲ್ ಬಹದ್ದೂರ್ ಶಾಸ್ತ್ರಿ ಅವರೂ ಹುಟ್ಟಿದರು. ಗಾಂಧೀಜಿಯ ಚಿಂತನೆಯ ಅನುಯಾಯಿಯಾಗಿ ಪ್ರಾಮಾಣಿಕ, ದೇಶಾಭಿಮಾನಿ, ಸ್ವಾಭಿಮಾನಿ, ದಕ್ಷ ಪ್ರಧಾನಿಯಾಗಿ ಹೆಸರು ಮಾಡಿದ್ದವರು ಶಾಸ್ತ್ರಿ ಅವರು. ಗಾಂಧೀಜಿಯ ಜೊತೆಜೊತೆಯಲ್ಲಿ ಶಾಸ್ತ್ರಿ ಅವರನ್ನೂ ಸ್ಮರಿಸುವುದು ನಮ್ಮ ಕರ್ತವ್ಯ ಅಲ್ಲವೇ?

ಆದರೆ ನಮ್ಮ ‘ಮೈತ್ರಿ ಸರ್ಕಾರ’ ಗಾಂಧಿ ಸ್ಮರಣೆಯ ಭರದಲ್ಲಿ ಶಾಸ್ತ್ರಿಯನ್ನು ಮರೆತೇಬಿಟ್ಟಿದೆ. ಇದು ಶೋಭೆ ತರುವಂಥದ್ದಲ್ಲ.

ADVERTISEMENT

– ಸಿ. ಸಿದ್ದರಾಜು ಆಲಕೆರೆ, ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.