ADVERTISEMENT

ಅರಿಯಬೇಕಿದೆ ಭಾಷೆಯ ಲಯ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 7 ಜುಲೈ 2022, 19:08 IST
Last Updated 7 ಜುಲೈ 2022, 19:08 IST

ಶಾಲಾ ಶಿಕ್ಷಣದಲ್ಲಿ ಭಾಷಾ ಕಲಿಕೆಯ ಮಹತ್ವದ ಬಗ್ಗೆ ಅರವಿಂದ ಚೊಕ್ಕಾಡಿ ಅವರು ಬರೆದಿರುವ ಲೇಖನ
(ಪ್ರ.ವಾ., ಜುಲೈ 7) ಸಮಯೋಚಿತವಾಗಿದೆ. ಸುಳ್ಯದಲ್ಲಿ ಶಾಲಾ ಶಿಕ್ಷಣವನ್ನು ಪಡೆದ ನಾನು ವಿದ್ಯಾರ್ಥಿಯಾಗಿದ್ದಾಗ ಹಿಂದಿ ಮತ್ತು ಇಂಗ್ಲಿಷ್ ಕಲಿಕೆಯ ಸಂದರ್ಭದಲ್ಲಿ ಈ ತಳಮಳಗಳನ್ನು ಅನುಭವಿಸಿದ್ದೇನೆ. ಭಾಷೆಯನ್ನು ಚೆನ್ನಾಗಿ ಕಲಿಸುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಕನ್ನಡ ಕಲಿಸುವ ವಿಧಾನದಲ್ಲಿ ಇಂಗ್ಲಿಷ್ ಕಲಿಸದಿರುವುದು. ಈ ಭಾಷೆಯ ಲಯ ಮತ್ತು ಚೌಕಟ್ಟು ವಿಭಿನ್ನ.

ಇಂಗ್ಲಿಷನ್ನು ಕನ್ನಡದ ಶೈಲಿಯಲ್ಲಿ ಕಲಿತ ಕನ್ನಡದ ಉತ್ತಮ ವಾಗ್ಮಿಗಳು ಕೂಡ ಇಂಗ್ಲಿಷಿನಲ್ಲಿ ಭಾಷಣ ಮಾಡುವಾಗ ಕನ್ನಡದಲ್ಲಿ ಯೋಚಿಸಿ ಇಂಗ್ಲಿಷ್‌ನಲ್ಲಿ ಮಾತನಾಡುವುದನ್ನು ಗಮನಿಸಿದ್ದೇನೆ. ಅದಕ್ಕೆ ಮುಖ್ಯ ಕಾರಣ, ಶಾಲೆಯಲ್ಲಿ ಇಂಗ್ಲಿಷನ್ನು ಕನ್ನಡ ಕಲಿಸುವ ಮಾದರಿಯಲ್ಲಿ ಕಲಿಸಿದ್ದು. ನಮ್ಮ ಮಕ್ಕಳುಹಿಂದಿ ಮತ್ತು ಇಂಗ್ಲಿಷ್ ಅನ್ನು ಸರಿಯಾದ ವಿಧಾನದಲ್ಲಿ ಕಲಿಯುವುದು ಮುಖ್ಯ. ಹೆಚ್ಚಿನ ಮಕ್ಕಳು ಮತ್ತು ಹೆತ್ತವರು ತಾಂತ್ರಿಕ ಶಿಕ್ಷಣದ ಹಿಂದೆ ಓಡುವ ಅಬ್ಬರದಲ್ಲಿ ವಿಜ್ಞಾನ ಹಾಗೂ ಗಣಿತ ಕಲಿಯುವುದರ– ಕಲಿಸುವುದರ ಕಡೆ ಹೆಚ್ಚು ಗಮನಹರಿಸುತ್ತಾರೆ. ಮಗುವಿಗೆ ಬೇಕಾದ ಭಾಷಾ ಸಾಮರ್ಥ್ಯದ ಅಗತ್ಯವನ್ನು ಲಘುವಾಗಿ ತೆಗೆದುಕೊಳ್ಳುತ್ತಾರೆ. ಇದರ ಫಲವಾಗಿ ಮಕ್ಕಳು ತೊಂದರೆಯನ್ನು ಅನುಭವಿಸುತ್ತಾರೆ.

– ಡಾ. ಕುಶ್ವಂತ್‌ ಕೋಳಿಬೈಲು,ಮಡಿಕೇರಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.