ADVERTISEMENT

ಖಾಸಗಿ ಬದುಕು ಅಸಹ್ಯಕರವಾಗದಿರಲಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2021, 18:03 IST
Last Updated 30 ಮಾರ್ಚ್ 2021, 18:03 IST

ಮಾಧ್ಯಮಗಳಲ್ಲಿ ಇತ್ತೀಚೆಗೆ ಜನಪ್ರತಿನಿಧಿಗಳ ಕೆಸರೆರಚಾಟ ಕಣ್ಣಿಗೆ ರಾಚುತ್ತಿದೆ. ರಾಜಕೀಯ ಮೇಲಾಟಕ್ಕೆ ಪರಸ್ಪರ ದ್ವೇಷ, ತೇಜೋವಧೆಗಳಿಗಾಗಿ ಷಡ್ಯಂತ್ರಗಳನ್ನು ರೂಪಿಸುವ ಮೂಲಕ ತಮ್ಮ ಉದ್ದೇಶಗಳಿಗೆ ಹೆಣ್ಣಿನ ಮಾನಭಂಗವನ್ನೂ ಲಕ್ಷಿಸದವರಿಗೆ ನಾಚಿಕೆಯಾಗಬೇಕು. ಖಾಸಗಿ ಬದುಕಿನಿಂದ ರಾಜಕಾರಣಿಗಳೇನೂ ಹೊರತಲ್ಲ. ಅವರ ಖಾಸಗಿ ಬದುಕಿನ ಲೀಲಾವಿನೋದಗಳು ಸಾರ್ವಜನಿಕವಾಗಿ ಅಸಹ್ಯಕರವೆನಿಸಿ ಕೆಟ್ಟದಾಗಿ ಮಾತನಾಡುವುದಕ್ಕೆ ಅವಕಾಶ ಕಲ್ಪಿಸಿಕೊಡಬಾರದು.

ಹಿಂದೆ ಆಗಿಹೋದ ರಾಜ್ಯದ ಕೆಲವು ಮುಖ್ಯಮಂತ್ರಿಗಳ ಖಾಸಗಿ ಬದುಕಿನ ಲೀಲಾವಿನೋದಗಳು ಅಸಹ್ಯಕರ
ವೆನಿಸದೆ ರಂಜನೀಯವೆನಿಸಿದ್ದವು. ಮೊನ್ನೆ ವಿಧಾನಸಭೆಯಲ್ಲಿ ಆರೋಗ್ಯ ಸಚಿವರು ಸಿಡಿಸಿದ ‘ಏಕಪತ್ನಿ ವ್ರತಸ್ಥ’ ಬಾಂಬ್ ಪ್ರತಿಯೊಬ್ಬರನ್ನೂ ಆತ್ಮವಿಮರ್ಶೆಗೆ ಒಡ್ಡಿಕೊಳ್ಳುವಂತೆ ಮಾಡಿದೆ. ಅದೇ ಸಮಯದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ತಾವು ಇಂತಹ ವಿಚಾರದಲ್ಲಿ ಒಮ್ಮೆ ಜೀವನದಲ್ಲಿ ಎಡವಿದ್ದುದಾಗಿ ಹೇಳಿದ್ದು, ಉಳಿದವರ ಆತ್ಮಸಾಕ್ಷಿಯನ್ನು ಎಚ್ಚರಿಸುವಂತಿತ್ತು.

ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ, ಸಿಂಧನೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.