ADVERTISEMENT

ವಾಚಕರ ವಾಣಿ: ಮಾತೃಭಾಷೆಗೆ ಆದ್ಯತೆ ಸಿಗಲಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 19:42 IST
Last Updated 22 ಫೆಬ್ರುವರಿ 2021, 19:42 IST

ತಾಯಿನುಡಿ ಮತ್ತು ಸಾಂಸ್ಕೃತಿಕ ಅಸ್ಮಿತೆ ಕುರಿತು ಯೋಗಾನಂದ ಅವರು ಬರೆದಿರುವ ಲೇಖನ (ಸಂಗತ,
ಫೆ. 22) ತುಂಬಾ ಪ್ರಸ್ತುತ ಹಾಗೂ ಮೌಲಿಕ ಚಿಂತನೆಗಳಿಂದ ಕೂಡಿದೆ. ವ್ಯಕ್ತಿಗೆ ತನ್ನ ತಾಯಿಯೊಂದಿಗಿನ ಸಂಬಂಧ
ದಷ್ಟೇ ಅತ್ಯಂತ ಸಮೀಪದ ಸಂಬಂಧ ತಾಯಿನುಡಿಯೊಂದಿಗೆ ಇದೆ. ಮಗುವು ತನ್ನ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ಅಥವಾ ಪರಿಸರದ ಭಾಷೆಯಲ್ಲಿ ಕಲಿತಿದ್ದೇ ಆದಲ್ಲಿ ಮಗುವಿನ ವ್ಯಕ್ತಿತ್ವ ನಿರಾಯಾಸವಾಗಿ ಅರಳಲು ಸಾಧ್ಯವಾಗುತ್ತದೆ.

ಪಾಲಕರು ಮಾತೃಭಾಷೆಯ ಮಹತ್ವವನ್ನು ಅರಿತುಕೊಂಡು ತಮ್ಮ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ಕೊಡಿಸಿದಾಗ ಮಾತ್ರ ನಮ್ಮ ಸಂಸ್ಕೃತಿಯ ಪರಿಚಯ ಆಗಲು ಸಾಧ್ಯ. ಸರ್ಕಾರ ಕೂಡ ಈ ದಿಸೆಯಲ್ಲಿ ಕನ್ನಡ ಭಾಷೆಯನ್ನು ಅನ್ನದ ಭಾಷೆಯನ್ನಾಗಿ ರೂಪಿಸುವಂತಹ ಕಾರ್ಯ ಮಾಡಬೇಕಾದದ್ದು ಅತಿ ಜರೂರು.

ಡಾ. ಸಂಜೀವಕುಮಾರ ಅತಿವಾಳೆ, ಬೀದರ್‌

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.