ADVERTISEMENT

ಸುತ್ತೋಲೆ ಇಂಗ್ಲಿಷ್‌ನಲ್ಲೇ ಯಾಕೆ?

​ಪ್ರಜಾವಾಣಿ ವಾರ್ತೆ
Published 9 ಮೇ 2021, 19:31 IST
Last Updated 9 ಮೇ 2021, 19:31 IST

ತಾನು ಹೊರಡಿಸುವ ನಿರ್ದೇಶನಗಳು, ಮಾರ್ಗಸೂಚಿಗಳನ್ನು ರಾಜ್ಯದ ಅಧಿಕೃತ ಭಾಷೆಯಾದ ಕನ್ನಡದಲ್ಲಿ ಹೊರಡಿಸಲು ಸರ್ಕಾರಕ್ಕೆ ಆಗುವುದಿಲ್ಲವೇ? ಯಾವುದೇ ವಿಚಾರ ಅಥವಾ ಪ್ರಮುಖ ಪ್ರಕಟಣೆಯ ಸುತ್ತೋಲೆಯನ್ನು ಪ್ರತೀ ಬಾರಿಯೂ ಇಂಗ್ಲಿಷ್‌ನಲ್ಲಿ ಪ್ರಕಟಿಸುವುದು ಎಷ್ಟು ಸರಿ? ಜನಸಾಮಾನ್ಯರಿಗೆ ಇಂಗ್ಲಿಷ್‌ ಭಾಷೆಯು ಕನ್ನಡದಷ್ಟು ಸರಳವಾಗಿ ಅರ್ಥವಾಗುವುದೇ? ಜವಾಬ್ದಾರಿಯುತ ಸ್ಥಾನದಲ್ಲಿರುವ ಆಡಳಿತಾಧಿಕಾರಿಗಳು ಜನರ ಸೂಕ್ಷ್ಮ ಸಂವೇದನೆಗಳು ಹಾಗೂ ಕುಂದುಕೊರತೆಗಳಿಗೆ ಸಂಬಂಧಿಸಿದ ಸುತ್ತೋಲೆಗಳನ್ನು ಇನ್ನಾದರೂ ಕನ್ನಡದಲ್ಲಿ ಪ್ರಕಟಿಸಿ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಬೇಕಿದೆ.

–ಅನಿಲ್ ಕುಮಾರ್, ನಂಜನಗೂಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT