ADVERTISEMENT

ವಾಚಕರ ವಾಣಿ: ಮಹಿಳಾ ಉದ್ಯಮಿಗಳಿಗೆ ನೆರವು ಸಿಗಲಿ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2020, 18:46 IST
Last Updated 27 ಆಗಸ್ಟ್ 2020, 18:46 IST

ಕೋವಿಡ್ ಸಾಂಕ್ರಾಮಿಕವು ಮಹಿಳಾ ಮಾಲೀಕತ್ವದ ಉದ್ಯಮ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಬಿಕ್ಕಟ್ಟು ಸೃಷ್ಟಿಸಿ, ಕೆಲ ಸಣ್ಣ ಉದ್ಯಮಗಳು ಮುಚ್ಚುವ ಹಂತ ತಲುಪಿರುವುದರ ಬಗೆಗಿನ ಸಂಪಾದಕೀಯ (ಪ್ರ.ವಾ., ಆ. 26) ಪ್ರಸ್ತುತ ಸಂದರ್ಭಕ್ಕೆ ಕನ್ನಡಿ ಹಿಡಿದಿದೆ. ಅನೇಕ ಮಹಿಳೆಯರು ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳುವ ಉದ್ದೇಶದಿಂದ ಸ್ವಂತ ಉದ್ದಿಮೆ ಸ್ಥಾಪಿಸಲು ಮುಂದಾಗುತ್ತಾರೆ. ಇಂತಹ ಹಲವರು ತಮ್ಮ ಇತಿ ಮಿತಿಯೊಳಗೆ ಕಾರ್ಯ ನಿರ್ವಹಿಸುತ್ತಿರುವುದನ್ನು ಕಾಣುತ್ತೇವೆ. ಈಗಾಗಲೇ ದೊಡ್ಡ ಮಟ್ಟದಲ್ಲಿ ಬೆಳೆದಿರುವವರಿಗೆ ಹೆಚ್ಚು ಸಮಸ್ಯೆಗಳಿಲ್ಲ. ಆದರೆ ಬೆಳವಣಿಗೆಯ ಹಂತದಲ್ಲಿರುವ ಸಣ್ಣ ಪ್ರಮಾಣದ ಉದ್ದಿಮೆದಾರರಿಗೆ ಈಗ ಸವಾಲು ಎದುರಾಗಿದೆ. ಅದನ್ನು ಎದುರಿಸಲು ಬೇಕಾದ ಆತ್ಮಸ್ಥೈರ್ಯ ತುಂಬುವ ಕೆಲಸ ಆಗಬೇಕು. ಅದಕ್ಕೆ ಸರ್ಕಾರ, ಸಂಘ– ಸಂಸ್ಥೆಗಳು ಹಾಗೂ ಸಮಾಜವು ಸಹಾಯಹಸ್ತ ಚಾಚಬೇಕು. ಸ್ತ್ರೀ ಪರ ಸಂಘಟನೆಗಳು ಈ ಸಣ್ಣ ಉದ್ದಿಮೆದಾರರ ಸಮಸ್ಯೆಗಳತ್ತ ಗಮನಹರಿಸಿ, ನ್ಯಾಯ ಕೊಡಿಸುವ ಜವಾಬ್ದಾರಿಯನ್ನು ಹೊರಬೇಕಿದೆ.

-ಅನುಪಮಾ ಮೂತಿ೯ ಕೆ.ಆರ್.,ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT