ADVERTISEMENT

ವಾಚಕರ ವಾಣಿ| ಪುಸ್ತಕ ಸರಬರಾಜಿನ ಹಣ ನೀಡುವುದೆಂದು?

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2021, 19:30 IST
Last Updated 29 ಡಿಸೆಂಬರ್ 2021, 19:30 IST

2018ರಲ್ಲಿ ಪ್ರಕಟಗೊಂಡ ಪುಸ್ತಕಗಳನ್ನು ಒಂದೂವರೆ ವರ್ಷದ ನಂತರ ತೆಗೆದುಕೊಂಡ ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಅದಾಗಿ ಹತ್ತಾರು ತಿಂಗಳುಗಳು ಕಳೆದರೂ ಪುಸ್ತಕದ ಹಣ ಪಾವತಿ ಮಾಡದೇ ಇರುವುದು ಎಷ್ಟು ಸರಿ? ಮುಂದಿನ ಪುಸ್ತಕಕ್ಕೆ ಈ ಹಣವನ್ನೇ ನಂಬಿಕೊಂಡಿರುವ ಸಣ್ಣ ಲೇಖಕರ ಗತಿ ಏನು? ಇಲಾಖೆಗೆ ದೂರವಾಣಿ ಕರೆ ಮಾಡಿದರೆ, ‘ಸರ್ಕಾರ ಇನ್ನೂ ಫಂಡ್‌ ಬಿಡುಗಡೆ ಮಾಡಿಲ್ಲ’ ಎನ್ನುವ ಸಿದ್ಧ ಉತ್ತರ ಬರುತ್ತದೆ. ಸರ್ಕಾರ ಇಂತಹ ಯೋಜನೆಗಳ ಬಗ್ಗೆ ವಿಳಂಬ ನೀತಿ ತೋರುತ್ತಿರುವುದೇಕೆ? ಲೇಖಕರನ್ನು ಉತ್ತೇಜಿಸುವುದು ಹೀಗೆಯೇ? ಸರ್ಕಾರಕ್ಕೆ ಸಾಹಿತ್ಯ, ಸಾಹಿತಿಗಳನ್ನು ಪ್ರೋತ್ಸಾಹಿಸುವ ಇಚ್ಛೆ ಇದ್ದಲ್ಲಿ ಕೂಡಲೇ ಪುಸ್ತಕ ಸರಬರಾಜಿನ ಹಣ ನೀಡಲಿ.

- ಡಾ. ಕೆ.ಪಿ.ಮಹಾಲಿಂಗು ಕಲ್ಕುಂದ,ಸಣ್ಣಯ್ಯ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT