ADVERTISEMENT

ವಾಚಕರ ವಾಣಿ| ಜೀವ ಅಮೂಲ್ಯ ನಿಜ, ಆದರೆ...

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 17:27 IST
Last Updated 27 ಜನವರಿ 2023, 17:27 IST

ತಿ.ನರಸೀಪುರ ತಾಲ್ಲೂಕಿನಲ್ಲಿ ಬೋನಿಗೆ ಬಿದ್ದ ಚಿರತೆಯನ್ನು ಕೊಲ್ಲಲು ಸ್ಥಳೀಯರು ಪಟ್ಟು ಹಿಡಿದಿದ್ದು (ಪ್ರ.ವಾ. ಜ. 27) ಚಿಂತಿಸುವಂತಿದೆ. ಜನಸಾಮಾನ್ಯರ ಜೀವ ತೆಗೆದ ಚಿರತೆಯನ್ನು ಕೊಲ್ಲಿ ಎಂಬ ಜನರ ಆಗ್ರಹ ಒಂದು ಲೆಕ್ಕದಲ್ಲಿ ಸರಿಯಿರಬಹುದು. ಆದರೆ ಅದು ಊರೊಳಕ್ಕೆ ನುಗ್ಗಲು, ಆಹಾರ ಸಿಗದೇ ಒದ್ದಾಡಲು, ಸೂಕ್ತ ಆಶ್ರಯ ಇಲ್ಲದಿರಲು ನಮ್ಮ ದುರಾಸೆಯು ಕಾರಣ ತಾನೆ?

ವನ್ಯಜೀವಿ ಅಂದರೆ ಜೀವ ತಲ್ಲಣಿಸುತ್ತದೆ. ಊರೊಳಗೆ ನುಗ್ಗಿ ಅಮಾಯಕರನ್ನು ಬಲಿ ಪಡೆದ ಆ ಜೀವಿಯನ್ನು ಮಾನವರಾದ ನಾವೂ ಕೊಲ್ಲುವುದು ತರವೇ? ಜೀವ ಕಳೆದುಕೊಂಡವರ, ಬಂಧು ಬಾಂಧವರ ಸಂಕಟ ಅಪಾರವಾದುದು. ಹಾಗೆಂದು ಮೂಕ ಜೀವಿಗಳನ್ನು ಕೊಲ್ಲಲು ನಮಗೇನು ಹಕ್ಕಿದೆ?

- ಸಂತೆಬೆನ್ನೂರು ಫೈಜ್ನಟ್ರಾಜ್, ಸಂತೆಬೆನ್ನೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.