ADVERTISEMENT

ಬಾಗಿನ ಅರ್ಪಣೆ ರೀತಿ ಇದಲ್ಲ

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 19:30 IST
Last Updated 18 ಜುಲೈ 2021, 19:30 IST

ರಾಜ್ಯದಲ್ಲಿನ ಜಲಾಶಯಗಳು ಭರ್ತಿಯಾದಾಗ ಜನಪ್ರತಿನಿಧಿಗಳಿಂದ ಜಲಾಶಯಕ್ಕೆ ಪೂಜೆ ಸಲ್ಲಿಸುವುದು ಹಾಗೂ ಬಾಗಿನ ಅರ್ಪಿಸುವುದು ವಾಡಿಕೆ. ಆದರೆ ಅವರು ಬಾಗಿನ ಅರ್ಪಿಸುವ ರೀತಿ ಸರಿಯಾಗಿ ಇರುವುದಿಲ್ಲ. ಜಲಾಶಯಕ್ಕೆ ಪೂಜೆ ಸಲ್ಲಿಸಿದ ನಂತರ ಅಣೆಕಟ್ಟೆಯ ಮೇಲಿನಿಂದಲೇ ಮೊರದ ಬಾಗಿನವನ್ನು ನೀರಿಗೆ ಎಸೆಯುವುದು ಬಾಗಿನ ಅರ್ಪಣೆಯ ಪದ್ಧತಿಗೆ ಅಪಮಾನ ಮಾಡಿದಂತೆ. ಜಲಾಶಯದ ಪೂಜೆಯ ನಂತರ ನದಿಯ ತೀರಕ್ಕೆ ತೆರಳಿ, ದಡದಲ್ಲಿ ನಿಂತು ಮಾತೆಗೆ ನೀರಿನಲ್ಲಿ ಬಾಗಿನವನ್ನು ತೇಲಿಬಿಡುವುದು ಸರಿಯಾದ ಕ್ರಮ.

ಕೆ.ಪ್ರಭಾಕರ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT