ADVERTISEMENT

ವಾಚಕರ ವಾಣಿ| ಜೂಜಾಟಕ್ಕೆ ಕೊನೆ ಹಾಡೋಣ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2022, 19:31 IST
Last Updated 1 ಏಪ್ರಿಲ್ 2022, 19:31 IST

ಯುಗಾದಿ ಹಬ್ಬ ಹಿಂದೂಗಳಿಗೆ ಹೊಸ ವರ್ಷದ ಆಗಮನ, ಖುಷಿ ತರುತ್ತದೆ. ಈ ಬಿರು ಬೇಸಿಗೆಯಲ್ಲಿಯೂ ಅತ್ಯಂತ ಆಪ್ಯಾಯಮಾನವಾಗಿ ಆಚರಿಸುವ ಹಬ್ಬ ಇದು. ಆದರೆ ಊರುಗಳಲ್ಲಿ ವರ್ಷಕ್ಕೊಂದು ಹಬ್ಬ ಎಂಬ ನೆಪದಲ್ಲಿ ಕೆಲವರು ಜೂಜಿನವ್ಯಾಮೋಹಕ್ಕೆ ಒಳಗಾಗಿ ಜೀವನ ನರಕ ಮಾಡಿಕೊಳ್ಳುತ್ತಿದ್ದಾರೆ. ಫಸಲು ಕೈಕೊಟ್ಟು, ಇತ್ತ ಸಾಲ ತೀರಿಸಲಾಗದೆ, ಅತ್ತ ಜೂಜಾಡಿ ಸೋತು ಮನೆಗೂ ಹೋಗಲಾರದೆ ಕೆಲವು ಸಂಸಾರಗಳೇ ಒಡೆದುಹೋಗುತ್ತಿವೆ.

ಹಬ್ಬದ ಸಮಯದಲ್ಲಿ ಮೊದಲೆಲ್ಲ ನಮ್ಮ ಗ್ರಾಮೀಣರು ಆಡುತ್ತಿದ್ದ ಎತ್ತಿನ ಬಂಡಿ ಸ್ಪರ್ಧೆ, ಹುಲಿವೇಷ, ಮೋಡಿ ವೇಷ, ಗ್ರಾಮೀಣ ಸಂಗೀತಗಳಾದ ಬಯಲಾಟ, ಲಾವಣಿ, ನೀರುಗ್ಗುವ ಸ್ಪರ್ಧೆಯಂತಹ ಗ್ರಾಮೀಣ ಕ್ರೀಡೆ ಹಾಗೂ ಮೋಜಿನ ಆಟಗಳಿರುವಾಗ ಕೂತಲ್ಲೇ ಕೂತು ಹಣ, ಸಮಯ ಎಲ್ಲವನ್ನೂ ಕಳೆದುಕೊಳ್ಳುವ ಜೂಜಾಟದ ಅಗತ್ಯ ಇದೆಯೇ? ಈ ಅನಿಷ್ಟ ಪದ್ಧತಿಗೆ ಕೊನೆಹಾಡಲು ಊರಿನ ಯುವ ಸಮುದಾಯ ಹಾಗೂ ಸಂಘ ಸಂಸ್ಥೆಗಳು ಮುಂದಾಗಬೇಕಿದೆ.

- ಎಂ.ಪರಮೇಶ್ವರ,ಮದ್ದಿಹಳ್ಳಿ, ಹಿರಿಯೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.