ADVERTISEMENT

ವಾಚಕರ ವಾಣಿ| ಇದೆಂತಹ ವಿಚಿತ್ರ ಆದೇಶ?!

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 9 ಸೆಪ್ಟೆಂಬರ್ 2022, 19:31 IST
Last Updated 9 ಸೆಪ್ಟೆಂಬರ್ 2022, 19:31 IST

‘ಸಿಐಡಿ ಅಧಿಕಾರಿಗಳು ಹಾಗೂ ಸಿಬ್ಬಂದಿಯು ಸುರಕ್ಷತೆ ದೃಷ್ಟಿಯಿಂದ ರಾತ್ರಿ ಹತ್ತು ಗಂಟೆಯಿಂದ ಬೆಳಿಗ್ಗೆ ಆರು ಗಂಟೆ ಅವಧಿಯಲ್ಲಿ ಯಾವುದೇ ವಾಹನದಲ್ಲಿ ಪ್ರಯಾಣಿಸಬಾರದು...’ ಎಂದು ಸಿಐಡಿ ಡಿಜಿಪಿ ಸೂಚನೆ ನೀಡಿರುವುದು ವರದಿಯಾಗಿದೆ (ಪ್ರ.ವಾ., ಸೆ. 9). ಇದೆಂತಹ ವಿಚಿತ್ರ ಆದೇಶ?! ಅಪಘಾತ ಆಗುತ್ತದೆಂದು ಸಂಚಾರವನ್ನೇ ನಿರ್ಬಂಧಿಸಬೇಕೆ? ಸಿಐಡಿ ಅಧಿಕಾರಿಗಳು ಮಾತ್ರ ಮನುಜರೇ? ಸಾರ್ವಜನಿಕ ಬಸ್ಸುಗಳಲ್ಲಿ ಸಂಚರಿಸುವವರು, ರಾತ್ರಿ ಪಾಳಿಯಲ್ಲಿ ಹತ್ತು ಹಲವು ಕರ್ತವ್ಯಗಳನ್ನು ನಿರ್ವಹಿಸುವವರು, ಪೊಲೀಸ್‌ ವಾಹನಗಳಲ್ಲಿ ಗಸ್ತು ತಿರುಗುವವರು, ಹಾಲು, ಪೇಪರ್ ಹಾಕುವವರು ಸೇರಿದಂತೆ ಬೇರೆಲ್ಲರೂ ಮನುಜರಲ್ಲವೇ?

ಅಪಘಾತಕ್ಕೆ ಮೂಲಕಾರಣ ಅತಿವೇಗ, ಕೆಟ್ಟರಸ್ತೆ, ಮಂಪರು, ಮದ್ಯಸೇವನೆ, ಅಜಾಗರೂಕತೆಯ ಚಾಲನೆ ಮುಂತಾದವು ಅಷ್ಟೆ. ಅಪಘಾತಗಳಿಗೆ ಹಗಲು ಮತ್ತು ರಾತ್ರಿ ಎಂಬ ಭೇದವಿಲ್ಲ. ಸಿಐಡಿ ಅಧಿಕಾರಿಗಳೇ ರಾತ್ರಿ ಸಂಚಾರಕ್ಕೆ ಬೆದರಿದರೆ ಸಾಮಾನ್ಯರ ಗತಿ ಏನು?

– ಪತ್ತಂಗಿ ಎಸ್. ಮುರಳಿ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.