ADVERTISEMENT

ವಾಚಕರ ವಾಣಿ| ನಿಜವಾದ ‘ಕಲ್ಯಾಣ’ದ ಸಾಕಾರವೆಂದು?

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 19:30 IST
Last Updated 23 ಜನವರಿ 2023, 19:30 IST

ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಏಳು ಜಿಲ್ಲೆಗಳ ನಿಜವಾದ ಅಭಿವೃದ್ಧಿ ಮಾಡದೆ, ಹೆಸರಿಗಷ್ಟೇ ಕಲ್ಯಾಣ ಎಂದಿದ್ದರೆ ಪ್ರಯೋಜನವಿಲ್ಲ. ಹಿಂದಿನ ಬಜೆಟ್‌ನಲ್ಲಿ ಅದಕ್ಕಾಗಿ ನೀಡಲಾಗಿದ್ದ ಹಣದಲ್ಲಿ ಬಹುಪಾಲು ಖರ್ಚೇ ಆಗಿಲ್ಲ. ಈ ಭಾಗದ ಸಮಸ್ಯೆಗಳನ್ನು ಆಲಿಸುವ ಕೆಲಸ ಮೊದಲು ಆಗಬೇಕಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು‌ ಪೂರ್ಣ ಪ್ರಮಾಣದಲ್ಲಿ ರಚಿಸಬೇಕು. ಖಾಲಿ ಇರುವ ಹುದ್ದೆಗಳನ್ನು ಕಾಲಮಿತಿಯಲ್ಲಿ ಭರ್ತಿ ಮಾಡಬೇಕು.

ಅಭಿವೃದ್ಧಿಯನ್ನು ಕಾಗದಪತ್ರಗಳಲ್ಲಷ್ಟೇ ಕಾಣುತ್ತಿದ್ದೇವೆ. ನಿಜವಾದ ಅರ್ಥದ ಕಲ್ಯಾಣ ಕರ್ನಾಟಕ ವನ್ನು ನೋಡಲು ಇನ್ನೂ ಎಷ್ಟು ವರ್ಷಗಳು ಬೇಕು? ಅನುದಾನ ನೀಡಿದ್ದರೂ ಅದನ್ನು ಸರಿಯಾಗಿ ಬಳಕೆಯನ್ನೇ ಮಾಡದಿದ್ದರೆ ಅಭಿವೃದ್ಧಿ ಕಾಣಲು ಹೇಗೆ ಸಾಧ್ಯ?

– ಶಶಿಕುಮಾರ್ ಕೆ., ರಾಯಚೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.