ADVERTISEMENT

ಸಂದರ್ಶನದ ಅಂಕ ಕಡಿತ: ಸಲ್ಲದ ಆತಂಕ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2022, 19:30 IST
Last Updated 29 ಮಾರ್ಚ್ 2022, 19:30 IST

ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗವು ನಡೆಸುವ ಪರೀಕ್ಷೆಯಲ್ಲಿ ಸಂದರ್ಶನದ ಅಂಕಗಳನ್ನು ಕಡಿತಗೊಳಿಸಿರುವ ಸರ್ಕಾರದ ಕ್ರಮದಿಂದ ಗ್ರಾಮೀಣ ಮತ್ತು ದುರ್ಬಲ ವರ್ಗಗಳ ಅಭ್ಯರ್ಥಿಗಳಿಗೆ ತೊಂದರೆಯಾಗುತ್ತದೆ ಎಂದು ಇತ್ತೀಚೆಗೆ ಉಭಯ ಸದನಗಳ ಕಲಾಪಗಳ ಚರ್ಚೆಯಲ್ಲಿ ಕೆಲವು ಜನಪ್ರತಿನಿಧಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಅನಗತ್ಯ ಆತಂಕವಾಗಿದೆ. ಸರ್ಕಾರದ ಈ ಕ್ರಮವು ಪ್ರತಿಭಾವಂತ, ಗ್ರಾಮೀಣ ಮತ್ತು ದುರ್ಬಲ ವರ್ಗಗಳ ಅಭ್ಯರ್ಥಿಗಳ ಆಯ್ಕೆಗೆ ಪೂರಕವಾಗಿ ಇದೆ. ಸಂದರ್ಶನಕ್ಕೆ ಹೆಚ್ಚಿನ ಅಂಕಗಳು ಇದ್ದಾಗ ಭ್ರಷ್ಟಾಚಾರಕ್ಕೆ ಹೆಚ್ಚಿನ ಅವಕಾಶವಿರುತ್ತದೆ. ಅಲ್ಲದೆ, ಮೆರಿಟ್‌ ಅಭ್ಯರ್ಥಿಗಳು ಹುದ್ದೆಯಿಂದ ವಂಚಿತರಾದ ಆರೋಪಗಳು ಹಿಂದಿನ ನೇಮಕಾತಿಯಲ್ಲಿ ಕೇಳಿಬಂದಿವೆ. ಸರ್ಕಾರವು ಯಾವುದೇ ಒತ್ತಡಕ್ಕೆ ಮಣಿಯದೆ, ಈ ದಿಟ್ಟ ಕ್ರಮವನ್ನು ಮುಂದಿನ ನೇಮಕಾತಿಗಳಲ್ಲಿ ಅಳವಡಿಸಬೇಕು.

- ಸತೀಶ,ಸಂಗಪ್ಪ ಹಡಪದ, ಲಕ್ಕಣ್ಣ, ಸಚಿನ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT