ADVERTISEMENT

ವಾಚಕರ ವಾಣಿ| ‌ನೊಂದ ಅಭ್ಯರ್ಥಿಗಳಲ್ಲಿ ವಿಶ್ವಾಸ ಮೂಡಲಿ

​ಪ್ರಜಾವಾಣಿ ವಾರ್ತೆ
Published 12 ಮೇ 2020, 19:45 IST
Last Updated 12 ಮೇ 2020, 19:45 IST

ಕೆಪಿಎಸ್‌ಸಿ ನೇಮಕಾತಿಯ ಅಂತಿಮ ಪಟ್ಟಿ ಪ್ರಕಟಣೆಯಲ್ಲಿನ ತೀವ್ರ ವಿಳಂಬವು ಉದ್ಯೋಗ ಆಕಾಂಕ್ಷಿಗಳ ಸಿಟ್ಟಿಗೆ ಕಾರಣವಾಗಿರುವುದು (ಪ್ರ.ವಾ., ಮೇ 12) ಸಕಾರಣವಾಗಿಯೇ ಇದೆ. ಸರ್ಕಾರಿ ಉದ್ಯೋಗ ಪಡೆಯಲು ಅಭ್ಯರ್ಥಿಗಳು ಹಾತೊರೆಯುತ್ತಿರುತ್ತಾರೆ. ತಮ್ಮ ಕಷ್ಟ ಕಾರ್ಪಣ್ಯಗಳೆಲ್ಲವನ್ನೂ ಬದಿಗಿಟ್ಟು, ಹಲವಾರು ವರ್ಷಗಳಿಂದ ಅಭ್ಯಸಿಸಿ ಪರೀಕ್ಷೆ ಎದುರಿಸಿ ಫಲಿತಾಂಶಕ್ಕಾಗಿ ಕಾಯುತ್ತಾ ವರ್ಷಗಳೇ ಉರುಳಿ ಹೋಗುತ್ತವೆ.

ಇನ್ನು ಕೆಲವು ಸಂದರ್ಭಗಳಲ್ಲಿ, ಫಲಿತಾಂಶ ಬಂದರೂ ಅಕ್ರಮ ನಡೆದ ಆರೋಪದಡಿ ಕೋರ್ಟ್‌ವರೆಗೂ ಹೋಗಿ ಇನ್ನಷ್ಟು ವಿಳಂಬವಾದ ನಿದರ್ಶನಗಳಿವೆ. ಇಂತಹ ವಿಳಂಬ ತಪ್ಪಿಸಲು ಸರ್ಕಾರ ಗಂಭೀರವಾಗಿ ಯೋಚಿಸಬೇಕಿದೆ. ನೇಮಕಾತಿ ಪ್ರಕ್ರಿಯೆಯು ಪಾರದರ್ಶಕವಾಗಿ ಇರುವಂತೆ ನೋಡಿಕೊಳ್ಳಬೇಕು. ಪ್ರತಿಭಾವಂತರಿಗೆ ಕಾಲಮಿತಿಯೊಳಗೆ ಉದ್ಯೋಗ ಸಿಗುವ ವಿಶ್ವಾಸವನ್ನು ಮೂಡಿಸಬೇಕಿದೆ.

- ಹೇಮಂತ್ ಕುಮಾರ್ ಎಸ್.ಕೆ.,ಮಂಡ್ಯ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.