ADVERTISEMENT

ಜಯಂತಿಗಳಿಗೆ ಮಿತಿ ಬೇಡವೇ?

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2022, 4:12 IST
Last Updated 30 ಮಾರ್ಚ್ 2022, 4:12 IST

ಬಿ.ಎಸ್.ಯಡಿಯೂರಪ್ಪ ಅವರ ಅಧಿಕಾರಾವಧಿಯಿಂದ ಆರಂಭವಾದ ಜಯಂತಿಗಳ ಆಚರಣೆಯ ಪರ್ವ ಸಿದ್ದರಾಮಯ್ಯ ಅವರ ಆಡಳಿತದ ಕಾಲ ಮಾತ್ರವಲ್ಲದೆ ಇದೀಗ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರದಲ್ಲೂ ಮುಂದುವರಿದಿದೆ. ಧ್ವನಿ ಇಲ್ಲದ ಸಮುದಾಯಗಳಿಗೆ ಜಯಂತಿಗಳು ಸಂಘಟನೆಗೆ ದಾರಿ ಮಾಡಿಕೊಡಬೇಕಾಗಿತ್ತು. ಆದರೆ ಅವು ಮಹಾಪುರುಷರ ಜಾತಿ ಬಿಂಬಿಸುವ ಕಾರ್ಯಕ್ರಮಗಳಾಗುವ ಮೂಲಕ ಮತ್ತಷ್ಟು ಜಾತೀಯತೆಗೆ ಕಾರಣವಾಗುತ್ತಿವೆ. ರಾಷ್ಟ್ರೀಯ ನಾಯಕರಿಗೆ ಸೀಮಿತವಾಗಿದ್ದ ಜಯಂತಿಗಳ ಸಾಲಿಗೆ ನಾಡಿನ ಐತಿಹಾಸಿಕ ಪುರುಷರ ಜಯಂತಿಗಳು ಸೇರಿದವು. ಇದೀಗ ಪೌರಾಣಿಕ ಪುರುಷರ ಜಯಂತಿಗಳು ಆರಂಭವಾಗಿವೆ. ಇದು ಎಲ್ಲಿಗೆ ಹೋಗಿ ನಿಲ್ಲುವುದೋ?

- ಎಮ್.ಆರ್.ಶೆಟ್ಟರ್,ಚಿಂಚೋಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT