ADVERTISEMENT

ವಾಚಕರ ವಾಣಿ| ನದಿ ನೀರು: ಆತಂಕ ಮೂಡಿಸುವ ಸಂಗತಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 21:16 IST
Last Updated 26 ಜನವರಿ 2023, 21:16 IST

ರಾಜ್ಯದಲ್ಲಿ ನದಿಗಳ ನೀರು ಕುಡಿಯಲು ಯೋಗ್ಯವಲ್ಲ ಎಂಬ ವರದಿಯು (ಪ್ರ.ವಾ., ಜ. 26) ನಾಗರಿಕ ಸಮಾಜ ಆತಂಕಪಡುವ ಗಂಭೀರ ವಿಷಯ. ಜನರ ಜೀವನದ ಮೂಲ ನೀರು. ಬಹುತೇಕ ರೋಗಗಳ ಮೂಲ ಕೂಡ ನೀರು. ಆದಕಾರಣ ನೀರನ್ನು ಎಷ್ಟು ಶುದ್ಧವಾಗಿ ಇಟ್ಟುಕೊಳ್ಳುತ್ತೇವೋ ಅಷ್ಟು ಆರೋಗ್ಯದಿಂದ ಜೀವಸಂಕುಲ ಬದುಕಲು ಸಾಧ್ಯ. ಜಲಮೂಲಗಳು ಮಲಿನವಾಗದಂತೆ ನೋಡಿಕೊಳ್ಳುವ ಗುರುತರ ಹೊಣೆಗಾರಿಕೆ ಜನಸಮುದಾಯದ ಮೇಲೆ ಇದೆ. ಸರ್ಕಾರ ಕೂಡ ಈ ದಿಸೆಯಲ್ಲಿ ಬಿಗಿಯಾದ ಕ್ರಮಗಳನ್ನು ಕೈಗೊಳ್ಳಬೇಕು. ತ್ಯಾಜ್ಯಗಳು ಕೆರೆ–ಕುಂಟೆ, ನದಿಗಳಿಗೆ ಸೇರದಂತೆ ನೋಡಿಕೊಳ್ಳಬೇಕು. ಕೈಗಾರಿಕೆಗಳಿಂದ ಹೊರಬಿಡುವ ತ್ಯಾಜ್ಯ ನೀರನ್ನು ಕಡ್ಡಾಯವಾಗಿ ಸಂಸ್ಕರಿಸಬೇಕು. ಜವಾಬ್ದಾರಿಯುತ ನಾಗರಿಕರಾಗಿ ನಾವು ಸರ್ಕಾರವನ್ನು ಸದಾ ಎಚ್ಚರಿಸುತ್ತಲೇ ಇರಬೇಕಾದ ಅಗತ್ಯವನ್ನು ಈ ವರದಿ ಸೂಚಿಸುತ್ತದೆ.

- ಶಂಕರ್ ಜಿ.ಎಸ್., ದೊಡ್ಡಸಿದ್ಧವ್ವನಹಳ್ಳಿ, ಚಿತ್ರದುರ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT