ADVERTISEMENT

ವಾಚಕರ ವಾಣಿ| ವಚನಗಳು ಇರಬೇಕಾದುದು ಕಪಾಟಿನೊಳಗಲ್ಲ!

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 5 ಸೆಪ್ಟೆಂಬರ್ 2022, 19:30 IST
Last Updated 5 ಸೆಪ್ಟೆಂಬರ್ 2022, 19:30 IST

‘ವಚನ ದರ್ಶನ’ ಧ್ವನಿಸುರುಳಿ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆದಿರುವುದಾಗಿ ವರದಿಯಾಗಿದೆ (ಪ್ರ.ವಾ., ಸೆ. 4). ವಚನಗಳು ಸಂಗೀತ, ಸಾಹಿತ್ಯದ ಗುಂಪಿಗೆ ಸೇರಿದವಲ್ಲ, ಅವು ನಡೆ ನುಡಿಯಲ್ಲಿ ಬೆರೆಯಬೇಕಾದ ಕ್ರಿಯೆಗಳು. ‘ವಚನ’ ಎಂಬುದೊಂದು ಬದುಕಿನ ಕ್ರಿಯಾ ಅನುಭವ. ಆಣೆ, ಪ್ರಮಾಣ, ಪ್ರತಿಜ್ಞೆ ಇವು ವಚನ ಎಂಬ ಶಬ್ದಕ್ಕಿರುವ ಸಮೀಪದ ಅರ್ಥಗಳು. ನಿತ್ಯ ಬದುಕಿನ ಅನುಭವದ ವೈಚಾರಿಕ ಮತ್ತು ವೈಜ್ಞಾನಿಕ ಸಾರಾಂಶವೇ ವಚನ. ಇದು ವಾಸ್ತವ ಸತ್ಯ. ಸನಾತನ ಸಂಪ್ರದಾಯದ ಕಟ್ಟುಪಾಡುಗಳನ್ನು ಬದಿಗಿಟ್ಟು, ಸಮ ಸಮಾಜದ ಕಡೆಗೆ ಹೆಜ್ಜೆ ಇಡಬೇಕಾದ ಕಟು ಸತ್ಯವನ್ನು ವಚನಗಳು ಹೇಳುತ್ತವೆ.

ಆದ್ಯರ ಅನುಭವದ ಈ ನುಡಿಗಳನ್ನು ಸಾಹಿತ್ಯ ಅಥವಾ ಸಂಗೀತವೆಂದು ಪರಿಗಣಿಸಿ, ಅವುಗಳನ್ನು ಓದಿ ಇಲ್ಲವೇ ಆಲಿಸಿ ಕಪಾಟಿನೊಳಗೆ ಜೋಡಿಸಿಡುವ ಯಾಂತ್ರಿಕ ಕೆಲಸವಾದರೆ, ಅದು ವಚನಗಳಿಗೆ ಅಪಾಯವನ್ನು ತಂದೊಡ್ಡುತ್ತದೆ. ವಚನಗಳನ್ನು ಬದುಕಿನ ಕ್ರಿಯೆಗೆ ಅಳವಡಿಸಿಕೊಳ್ಳುವ ಬದ್ಧತೆಯ ಕೆಲಸ ಎಲ್ಲರಿಂದ ಎಲ್ಲರಿಗಾಗಿ ಆಗಬೇಕಾಗಿದೆ.

– ತಾ.ಸಿ.ತಿಮ್ಮಯ್ಯ,ಬೆಂಗಳೂರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.