ADVERTISEMENT

ವಾಚಕರ ವಾಣಿ| ಕಲಾವಿದರದ್ದೇ ಧ್ವನಿ ಬೇಕು

​ಪ್ರಜಾವಾಣಿ ವಾರ್ತೆ
Published 22 ಮೇ 2020, 20:00 IST
Last Updated 22 ಮೇ 2020, 20:00 IST

ಶಂಕರ್‌ನಾಗ್‌ ನಿರ್ದೇಶನದ ‘ಮಾಲ್ಗುಡಿ ಡೇಸ್’ ಧಾರಾವಾಹಿಯನ್ನು ಕನ್ನಡದಲ್ಲೇ ನೋಡಬೇಕೆಂಬುದು ಕನ್ನಡಿಗರ ಬಹುದಿನಗಳ ಕನಸು. ಅದೀಗ ‘ಝೀ ಕನ್ನಡ’ ವಾಹಿನಿಯಲ್ಲಿ ಕನ್ನಡ ಭಾಷೆಯಲ್ಲಿ ಪ್ರಸಾರ ಆಗುತ್ತಿರುವುದು ಸಂತೋಷದ ವಿಚಾರ. ಇದರಲ್ಲಿ ನಟಿಸಿದ್ದ ಅನೇಕರು ಇಂದಿಗೂ ನಮ್ಮ ನಡುವೆ ಇದ್ದಾರೆ. ‘ಮಾಲ್ಗುಡಿ ಡೇಸ್’ ಕನ್ನಡ ಅವತರಣಿಕೆಯಲ್ಲಿ ಈಗ ಲಭ್ಯವಿರುವ ಕಲಾವಿದರಿಂದಲೇ ಮರುಧ್ವನಿಮುದ್ರಣ ಮಾಡಿಸುವುದು ಅತ್ಯಂತ ಸೂಕ್ತ. ಅದು ಬಿಟ್ಟು, ಬೇರೆ ಕಲಾವಿದರು ಧ್ವನಿ ನೀಡಿರುವುದು ವೀಕ್ಷಕರಿಗೆ ಕಿರಿಕಿರಿ ಉಂಟುಮಾಡುತ್ತಿದೆ. ಇನ್ನು ಮುಂದಾದರೂ ನಟಿಸಿರುವವರ ಧ್ವನಿಯನ್ನೇ ಕೇಳುವಂತಾಗಿ, ನಮ್ಮದೇ ಧಾರಾವಾಹಿ ನೋಡುತ್ತಿದ್ದೇವೆ ಎಂಬ ಭಾವ ಮೂಡುವಂತೆ ಮಾಡಲಿ.

ಪತ್ತಂಗಿ ಎಸ್. ಮುರಳಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT