ADVERTISEMENT

ಪರೀಕ್ಷಾ ಸಮಯ: ಬದಲಾವಣೆ ತರವಲ್ಲ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 19:29 IST
Last Updated 28 ನವೆಂಬರ್ 2019, 19:29 IST

ಪದವಿಪೂವ೯ ಶಿಕ್ಷಣ ಇಲಾಖೆ ಈ ವರ್ಷದಿ೦ದ ದ್ವಿತೀಯ ಪಿಯುಸಿ ವಾಷಿ೯ಕ ಪರೀಕ್ಷೆಯ ಸಮಯವನ್ನು ಬೆಳಗಿನ 9.15ರಿ೦ದ ಮಧ್ಯಾಹ್ನ 12.15ಕ್ಕೆ ಬದಲಾಗಿ ಬೆಳಗಿನ 10.15ರಿಂದ ಮಧ್ಯಾಹ್ನ 1.15ಕ್ಕೆ ಬದಲಾಯಿಸಿದೆ. ಉತ್ತರ ಕರ್ನಾಟಕದ ಹಲವು ಪ್ರದೇಶಗಳಲ್ಲಿ ಮಾರ್ಚ್‌ ತಿಂಗಳಲ್ಲಿ ಬಿಸಿಲು ತೀವ್ರವಾಗಿರುತ್ತದೆ. 10.15ರಿಂದ ಪರೀಕ್ಷೆ ಪ್ರಾರಂಭವಾಗುವುದರಿಂದ ವಿದ್ಯಾರ್ಥಿಗಳಲ್ಲಿ ಬೆಳಗಿನ ತಾಜಾ ಮನಃಸ್ಥಿತಿ ಕಳೆಗುಂದಿರುತ್ತದೆ. ಇದರಿಂದ, ಅವರು ಮಾನಸಿಕವಾಗಿ ಹೈರಾಣಾಗಿ ಫಲಿತಾಂಶ ಕುಗ್ಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪಿ.ಯು ಮಂಡಳಿಯು ಈ ಪ್ರದೇಶಗಳ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟು, ಪರೀಕ್ಷಾ ಸಮಯವನ್ನು ಮೊದಲಿನಂತೆಯೇ ಇರಿಸಲಿ.

-ಅಶೋಕ ಓಜಿನಹಳ್ಳಿ, ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT