ADVERTISEMENT

ಜನನಾಯಕರೆಂಬ ವ್ಯಾಘ್ರಗಳು

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 19:28 IST
Last Updated 28 ನವೆಂಬರ್ 2019, 19:28 IST

ಸ್ವಾರ್ಥ ರಾಜಕಾರಣ, ಹಣ, ಅಧಿಕಾರದ ತಿಕ್ಕಲುತನದಿಂದಾಗಿ ತಮ್ಮನ್ನು ತಾವೇ ಅಡವಿಟ್ಟುಕೊಂಡಿರುವ ಅನರ್ಹ ಶಾಸಕರನ್ನು ಹೋದ ಕಡೆಯಲ್ಲೆಲ್ಲಾ ಮತದಾರರು ತರಾಟೆಗೆ ತೆಗೆದುಕೊಳ್ಳುತ್ತಿರುವುದು ಜನರು ಜಾಗೃತಗೊಂಡಿರುವುದರ ಸಂಕೇತ. ಸಮಾಜ ಎಚ್ಚೆತ್ತುಕೊಳ್ಳುತ್ತಿದೆ ಎಂದರ್ಥ.
ಸರ್ಕಾರದ ಬೊಕ್ಕಸಕ್ಕೆ ಅನಗತ್ಯವಾಗಿ ಹೊರೆಯಾಗುವ ಉಪಚುನಾವಣೆಯಿಂದ ಆಗುವ ನಷ್ಟ–ಕಷ್ಟಗಳು ಪ್ರಜೆಗಳಿಗೇ ಹೊರತು ಜನನಾಯಕರಿಗಂತೂ ಯಾವ ಬಿಸಿಯೂ ತಟ್ಟುವುದಿಲ್ಲ. ಪ್ರಜಾತಂತ್ರ ವ್ಯವಸ್ಥೆಯನ್ನೇ ಮೂರಾಬಟ್ಟೆ ಮಾಡಿ, ಈಗ ಅದೇ ಪ್ರಜೆಗಳ ಮುಂದೆ ಕೈ ಜೋಡಿಸಿ ನಾಟಕದ ಮಾತುಗಳನ್ನಾಡುತ್ತಿರುವ ಜನನಾಯಕರೆಂಬ ವ್ಯಾಘ್ರಗಳು ಸಮಾಜಕ್ಕೆ ಎಂದಿದ್ದರೂ ಮಾರಕವೇ.

-ಅಶ್ವತ್ಥ ಕಲ್ಲೇದೇವರಹಳ್ಳಿ, ಕಡೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT