ADVERTISEMENT

ವಾಚಕರ ವಾಣಿ| ಮನೆಯೇ ಮಂದಿರ ಆಗಲಾರದು

​ಪ್ರಜಾವಾಣಿ ವಾರ್ತೆ
Published 22 ಮೇ 2020, 20:00 IST
Last Updated 22 ಮೇ 2020, 20:00 IST

ಮುಜರಾಯಿ ದೇವಾಲಯಗಳಲ್ಲಿ ಆನ್‌ಲೈನ್ ಸೇವೆ ಆರಂಭಿಸಲು ಸಕಾ೯ರ ಚಿಂತನೆ ನಡೆಸಿದೆ. ಆದರೆ ಮನೆಯೇ ಮಂದಿರ ಆಗಲು ಸಾಧ್ಯವಿಲ್ಲ. ಮಾನಸಿಕ ಶಾಂತಿ, ನೆಮ್ಮದಿಗಾಗಿ ತೀರ್ಥಕ್ಷೇತ್ರಗಳ ದರ್ಶನ ಮಾಡುತ್ತೇವೆ. ದೇವರ ಮೂರ್ತಿಯ ಎದುರು ನಿಂತು, ಕ್ಷಣಕಾಲ ಏಕಾಗ್ರತೆಯಿಂದ ಧ್ಯಾನ, ಪ್ರಾರ್ಥನೆ ಮಾಡಿದಾಗ ಸಿಗುವ ಪರಮಾನಂದ ವರ್ಣನಾತೀತವಾದುದು. ಕುಟುಂಬಸಮೇತರಾಗಿ ತೀರ್ಥಕ್ಷೇತ್ರಗಳ ದರ್ಶನ, ಪ್ರಸಾದ ಸ್ವೀಕಾರ ನಮ್ಮಲ್ಲಿ ಧನ್ಯತೆಯನ್ನೂ, ಆತ್ಮಸಂತೃಪ್ತಿಯನ್ನೂ ಮೂಡಿಸುತ್ತದೆ. ಪ್ರಕೃತಿ ವೀಕ್ಷಣೆ ಹಾಗೂ ಲೋಕಾನುಭವಕ್ಕೂ ಅವಕಾಶ ಸಿಗುತ್ತದೆ.

ಅಂಚೆ ಅಥವಾ ಕೊರಿಯರ್ ಮೂಲಕ ಬರುವ ಪ್ರಸಾದಕ್ಕೆ ಆ ಮಹತ್ವ ಇರಲಾರದು. ಜೊತೆಗೆ ಆನ್‌ಲೈನ್ ಸೇವೆ
ಯಿಂದಾಗಿ, ಸಾರಿಗೆ ಇಲಾಖೆ, ಪ್ರವಾಸೋದ್ಯಮ, ಹೋಟೆಲ್‌ಗಳು, ವಸತಿ ನಿಲಯ, ಅರ್ಚಕರಿಗೂ ಅಪಾರ ನಷ್ಟವಾಗುವ ಭೀತಿ ಇದೆ. ಹೀಗಾಗಿ, ಕಟ್ಟುನಿಟ್ಟಿನ ನಿರ್ಬಂಧಗಳನ್ನು ಕಾಯ್ದುಕೊಂಡು ದೇವಾಲಯಗಳನ್ನು ಸಾರ್ವಜನಿಕರ ದರ್ಶನಕ್ಕೆ ಮುಕ್ತ ಮಾಡುವುದು ಒಳ್ಳೆಯದು.

-ಆರ್.ಎನ್.ಪೂವಣಿ,ಉಜಿರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.