ADVERTISEMENT

ಸಿಕ್ಕಿಬೀಳುವವರು... ನಿಭಾಯಿಸುವವರು...

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2019, 20:00 IST
Last Updated 23 ಡಿಸೆಂಬರ್ 2019, 20:00 IST

‘ಎದೆ ಸೀಳಿದರೆ ಒಂದಕ್ಷರ ಇಲ್ಲದವರನ್ನು, ಪಂಕ್ಚರ್ ಹಾಕುವವರನ್ನು ಸೇರಿಸಿಕೊಂಡು ಗಲಭೆಮಾಡಿಸಲಾಗುತ್ತಿದೆ’ ಎಂದು ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಹೇಳಿದ್ದಾರೆ (ಪ್ರ.ವಾ., ಡಿ. 23). ಹೌದು, ಅವರು ಸರಿಯಾಗಿಯೇ ಹೇಳಿದ್ದಾರೆ. ಅನಕ್ಷರಸ್ಥರು ಎಂದೂ ಅಮಾಯಕರೇ. ಅವರು ಏನೇ ಮಾಡಿದರೂ ಸಿಕ್ಕಿಬೀಳುತ್ತಾರೆ. ಆದರೆ, ಓದಿದವರು ಏನೇ ಮಾಡಿದರೂ ಜಾಣ್ಮೆಯಿಂದ ನಿಭಾಯಿಸುತ್ತಾರೆ! ಖಂಡಿತ ಅವರು ಸಿಕ್ಕಿಬೀಳಲಾರರು. ಜನಪ್ರತಿನಿಧಿಗಳು ಹಾಗೂ ಸರ್ಕಾರಕ್ಕೆ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ಮಾಡಬೇಕಾದ ಮತ್ತು ಅವರ ಬದುಕನ್ನು ಹಸನುಗೊಳಿಸಬೇಕಾದ ಜವಾಬ್ದಾರಿಯ ಅರಿವು ಹಾಗೂ ಸಾಮಾಜಿಕ ಕಳಕಳಿ ಇರಬೇಕು.

ಪ್ರಕಾಶ್ ಎಚ್.ಆರ್., ಹೊಸನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT