ADVERTISEMENT

ವಾಚಕರ ವಾಣಿ: ನಾಡಹಬ್ಬದಲ್ಲಿ ಮಾಯವಾಯ್ತು ನಾಡಭಾಷೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 19:31 IST
Last Updated 27 ಸೆಪ್ಟೆಂಬರ್ 2022, 19:31 IST

ರಾಷ್ಟ್ರಪತಿ ಅವರು ಮೈಸೂರಿಗೆ ಬಂದು ನಾಡಹಬ್ಬ ದಸರಾವನ್ನು ಉದ್ಘಾಟಿಸಿದರು. ಈ ಸಮಾರಂಭದ ವೇದಿಕೆಯಲ್ಲಿ ಹಾಕಿದ್ದ ಬ್ಯಾನರ್ ಸಂಪೂರ್ಣವಾಗಿ ಇಂಗ್ಲಿಷ್‌ನಲ್ಲಿತ್ತು. ನಾಡಹಬ್ಬದಲ್ಲಿ ನಾಡಿನ ನುಡಿಗೆ ಜಾಗವಿಲ್ಲದ ಮೇಲೆ ಅಂತಹ ನಾಡಹಬ್ಬಕ್ಕೆ ಅರ್ಥವಿದೆಯೇ?

ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರವು ಮಸೂದೆ ಮಂಡಿಸಿದೆ. ಕನ್ನಡ ಭಾಷೆ ಬಳಕೆ ವಿಚಾರದಲ್ಲಿ ನಿಯಮ ಉಲ್ಲಂಘನೆಗೆ ದಂಡ ವಿಧಿಸಲು ಮುಂದಾಗಿದೆ. ಆದರೆ ಸರ್ಕಾರದ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲೇ ಹೀಗೆ ಕನ್ನಡವನ್ನು ಕಡೆಗಣಿಸುವುದು ಸರಿಯೇ?

ನಾಗರಾಜ್ ಮಾದೇಗೌಡ, ಕನಕಪುರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.