ADVERTISEMENT

ವಾಚಕರವಾಣಿ: ಆಹಾರ ತ್ಯಾಜ್ಯದ ಸಮಸ್ಯೆಗೆ ಬೇಕಿದೆ ಪರಿಹಾರ

​ಪ್ರಜಾವಾಣಿ ವಾರ್ತೆ
Published 29 ಜುಲೈ 2022, 19:31 IST
Last Updated 29 ಜುಲೈ 2022, 19:31 IST

ಬ್ರಿಟನ್‌ನಲ್ಲಿ ಆಹಾರ ತ್ಯಾಜ್ಯವು ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ. ಆ ದೇಶದಲ್ಲಿ ಪ್ರತಿವರ್ಷ 94 ಲಕ್ಷ ಟನ್ ಆಹಾರ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ ಎಂದು ಇತ್ತೀಚಿಗೆ ವರದಿಯಾಗಿದೆ. ಈ ತ್ಯಾಜ್ಯವನ್ನು ಖಾಲಿ ಜಾಗಗಳಲ್ಲಿ ಸುರಿಯಲಾಗುತ್ತದೆ. ಆಹಾರ ತ್ಯಾಜ್ಯವು ಮೀಥೇನ್ ಅನಿಲವನ್ನು ಬಿಡುಗಡೆ ಮಾಡಿ, ಜಾಗತಿಕ ತಾಪಮಾನ ಏರಿಕೆ ಮತ್ತಷ್ಟು ಹೆಚ್ಚಲು ಕಾರಣವಾಗುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇನ್ನೊಂದೆಡೆ ಆಫ್ರಿಕಾ ಖಂಡದ ಬಹುತೇಕ ದೇಶಗಳಲ್ಲಿ ಆಹಾರ ಸಿಗದೆ ಮಕ್ಕಳು ಹಸಿವಿನಿಂದ ಸಾಯುತ್ತಿದ್ದಾರೆ. ಒಂದು ವೇಳೆ ಆಹಾರ ಸಿಕ್ಕರೂ ಪೌಷ್ಟಿಕಾಂಶದ ಕೊರತೆಯಿಂದ ಅಪೌಷ್ಟಿಕತೆಗೆ ಒಳಗಾಗಿ, ಕೆಲವೊಂದು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇಂತಹ ವೈರುಧ್ಯಮಯ ಸ್ಥಿತಿಯನ್ನು ಭಾರತ ಸೇರಿದಂತೆ ಅನೇಕ ದೇಶಗಳಲ್ಲಿಯೂ ಕಾಣುತ್ತಿದ್ದೇವೆ. ಇದಕ್ಕೆ ಜಾಗತಿಕವಾಗಿ ಪರಿಹಾರವನ್ನು ಕಂಡುಕೊಳ್ಳಬೇಕಿದೆ.

- ಬಸವರಾಜ ನರಗಟ್ಟಿ,ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT