ADVERTISEMENT

ವಾಚಕರವಾಣಿ: ಕನ್ನಡಿಗರ ಬದುಕು ಹಸನಾಗಲಿ

​ಪ್ರಜಾವಾಣಿ ವಾರ್ತೆ
Published 27 ಜುಲೈ 2022, 18:49 IST
Last Updated 27 ಜುಲೈ 2022, 18:49 IST

‘ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕಾಗಿ ನಾನು ಜೋಳಿಗೆ ಹಿಡಿಯಲು ಸಿದ್ಧ’ ಎಂದು ಹುಕ್ಕೇರಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ (ಪ್ರ.ವಾ., ಜುಲೈ 26). ಅವರ ದೃಢನಿರ್ಧಾರ ಸ್ವಾಗತಾರ್ಹ. ಆದರೆ, ಕರ್ನಾಟಕದಿಂದ ಗೋವಾಕ್ಕೆ ಹೊಟ್ಟೆ ಹೊರೆಯಲೆಂದು ಗುಳೆ ಹೋಗಿರುವ ಕಾರ್ಮಿಕರ ಸ್ಥಿತಿ ಶೋಚನೀಯವಾಗಿದೆ. ಅವರನ್ನು ಒಕ್ಕಲೆಬ್ಬಿಸುವ ಕೆಲಸ ಪದೇ ಪದೇ ನಡೆದಿರುವ ಬಗ್ಗೆ ವರದಿಯಾಗುತ್ತಲೇ ಇರುತ್ತದೆ. ಸ್ವಾಮೀಜಿ ಇಂಥ ಜ್ವಲಂತ ಸಮಸ್ಯೆಯನ್ನು ಕೈಗೆತ್ತಿಕೊಂಡು ಅದರ ಪರಿಹಾರಕ್ಕೆ ಶ್ರಮಿಸಿದರೆ ಕನ್ನಡಿಗರಿಗೆ ನಿಜಕ್ಕೂ ದೊಡ್ಡ ಉಪಕಾರವಾಗುತ್ತದೆ.

- ಸಿ. ಚಿಕ್ಕತಿಮ್ಮಯ್ಯ ಹಂದನಕೆರೆ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT