ADVERTISEMENT

ವಾಚಕರ ವಾಣಿ: ಇದೆಂಥ ರಾಜಕೀಯ?

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2021, 22:00 IST
Last Updated 4 ನವೆಂಬರ್ 2021, 22:00 IST

ಸಿಂದಗಿ ಮತ್ತು ಹಾನಗಲ್ ಉಪಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಹೀನಾಯ ಸೋಲನುಭವಿಸಿದ ಜೆಡಿಎಸ್ ವರ್ತನೆ ಯಾರ ಮಗುವನ್ನೋ ಬಾವಿಗೆ ತಳ್ಳಿ ಆಳ ನೋಡುವಂತಿತ್ತು. ಮುಸ್ಲಿಂ ಅಭ್ಯರ್ಥಿಯನ್ನು ಗೆಲ್ಲಿಸುವ ನಿಜವಾದ ಕಳಕಳಿಯಿದ್ದರೆ ಹಾಸನದಲ್ಲೋ ಮಂಡ್ಯದಲ್ಲೋ ಟಿಕೆಟ್ ನೀಡಿ ಗೆಲ್ಲಿಸಬಹುದಲ್ಲ. ಜೆಡಿಎಸ್ ಸ್ಪರ್ಧಿಸಿದ್ದು ತಾನು ಗೆಲ್ಲಬೇಕೆಂದಲ್ಲ, ಅಲ್ಪಸಂಖ್ಯಾತರ ಮತಗಳು ವಿಭಜನೆಯಾಗಿ ಕಾಂಗ್ರೆಸ್ ಸೋಲಬೇಕೆಂದು. ಇದಕ್ಕಾಗಿ ಹತ್ತು ದಿನ ಅವಿರತ ಪ್ರಚಾರ!

ಅಲ್ಪಸಂಖ್ಯಾತರ ಹೆಗಲ ಮೇಲೆ ಬಂದೂಕು ಇಟ್ಟು ಕಾಂಗ್ರೆಸ್‌ಗೆ ಗುಂಡಿಕ್ಕಬೇಕೆಂಬ ಅದರ ಆಸೆ ಮುಸ್ಲಿಮರ ಜಾಣನಡೆಯಿಂದ ಭಗ್ನಗೊಂಡಿದೆ. ಇಂಥ ರಾಜಕೀಯ ಯಾವ ಪುರುಷಾರ್ಥಕ್ಕೆ? ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಜಗತ್ತಿಗೆ ಕಾಣುವುದಿಲ್ಲವೇ?

ಶಿವಕುಮಾರ ಬಂಡೋಳಿ,ಹುಣಸಗಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.