ADVERTISEMENT

ವಾಚಕರ ವಾಣಿ: ಮಾನಸಿಕ ಆರೋಗ್ಯ ಬಲಿಯಾಗದಿರಲಿ

​ಪ್ರಜಾವಾಣಿ ವಾರ್ತೆ
Published 8 ಮೇ 2022, 20:45 IST
Last Updated 8 ಮೇ 2022, 20:45 IST

ಶಬ್ದಮಾಲಿನ್ಯ ಇಂದು ಒಂದು ಗಂಭೀರ ಸಮಸ್ಯೆಯಾಗಿದೆ. ಅಲ್ಲದೆ ಜನರ ಮಾನಸಿಕ ಆರೋಗ್ಯಕ್ಕೆ ಬೆದರಿಕೆಯಾಗಿದೆ. ಶಬ್ದವು ಆರೋಗ್ಯಕ್ಕೆ ಮಾರಕವಾಗಿರುವಂತಿದ್ದರೆ ಯಾವುದೇ ರೂಪದಲ್ಲಿರಲಿ, ಯಾರೇ ಉಂಟು ಮಾಡಲಿ ಅದನ್ನು ನಿಲ್ಲಿಸಲು ಕಾನೂನು ಕ್ರಮ ತೆಗೆದುಕೊಳ್ಳಲಿ. ಬೆಳ್ಳಂಬೆಳಿಗ್ಗೆಯೇ ವಿಪರೀತ ಶಬ್ದ ಕೇಳಿಕೊಂಡು ನಿದ್ರೆಯಿಂದ ಎಚ್ಚರವಾಗುವುದು ಆರೋಗ್ಯಕ್ಕೆ ಹಾನಿಕರ. ಇದು ವೈಜ್ಞಾನಿಕವಾಗಿ ಸಾಬೀತಾಗಿದೆ.

ವೃದ್ಧರ ಆರೋಗ್ಯಕ್ಕೆ ಇನ್ನಷ್ಟು ತೊಂದರೆ ಉಂಟುಮಾಡುತ್ತದೆ. ಅಲ್ಲದೆ ಚಿಕ್ಕ ಮಕ್ಕಳ ಮೆದುಳಿನ ಬೆಳವಣಿಗೆಯ ಮೇಲೆ ಈ ರೀತಿಯ ಶಬ್ದ ತುಂಬಾ ಗಂಭೀರ ಪರಿಣಾಮ ಬೀರುತ್ತದೆ ಎಂಬುದೂ ವೈಜ್ಞಾನಿಕವಾಗಿ ಸಾಬೀತಾಗಿರುವ ವಿಚಾರ.

ಮುಂಜಾನೆ ಐದು ಅಥವಾ ಆರು ಗಂಟೆಗೆ ಮತ್ತು ರಾತ್ರಿ ಜನರು ಮಲಗುವ ಹೊತ್ತಿನಲ್ಲಿ ಮೈಕು ಹಾಕಿಕೊಂಡು ನಿಶ್ಶಬ್ದದ ವಾತಾವರಣ ಹಾಳುಮಾಡುವ ಕೆಲಸವನ್ನು ಯಾರೇ ಮಾಡಿದರೂ ಅದು ಅಕ್ಷಮ್ಯ ಮತ್ತು ಶಿಕ್ಷಾರ್ಹ. ಅದನ್ನು ಬಿಟ್ಟು ‘ನೀವು ಮಾಡಿದರೆ ನಾವೂ ಮಾಡುತ್ತೇವೆ’ ಎಂದರೆ, ಅದು ಕಾನೂನು ಮತ್ತು ಸಂವಿಧಾನಕ್ಕೆ ತೋರುವ ಅಗೌರವವೇ ವಿನಾ ಮತ್ತೇನೂ ಅಲ್ಲ. ಆದ್ದರಿಂದ ಸರ್ಕಾರ ಶಬ್ದಮಾಲಿನ್ಯ ಉಂಟುಮಾಡುವ ಯಾವುದೇ ರೀತಿಯ ಚಟುವಟಿಕೆಗಳನ್ನು ಕಾನೂನು ಚೌಕಟ್ಟಿನಲ್ಲಿ ನಿವಾರಿಸಲು ತಕ್ಷಣ ಕ್ರಮ ಕೈಗೊಂಡು ಜನರ ಮಾನಸಿಕ ಆರೋಗ್ಯ ಕಾಪಾಡಲಿ.

ADVERTISEMENT

ರಾಜಶೇಖರ ಮೂರ್ತಿ ಬೆಳಗನಹಳ್ಳಿ,ಎಚ್.ಡಿ.ಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.