ADVERTISEMENT

ವಾಚಕರ ವಾಣಿ: ಉಕ್ರೇನ್ ಬಿಕ್ಕಟ್ಟು: ಪ್ರಚಾರಕ್ಕೆ ಬಾರದ ಅಂಶಗಳು

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2022, 21:00 IST
Last Updated 28 ಫೆಬ್ರುವರಿ 2022, 21:00 IST

ಫೆಬ್ರುವರಿ 24ರಿಂದ ಉಕ್ರೇನ್‌ನಲ್ಲಿನ ಘಟನಾಕ್ರಮ ಗಮನಿಸುತ್ತಿರುವವರು, ಭಾರತೀಯ ವಿದ್ಯಾರ್ಥಿಗಳು ಅಲ್ಲಿಗೆ ಏಕೆ ಹೋದರು ಎಂದೂ ಪ್ರಶ್ನಿಸಿಕೊಂಡಿರಬಹುದು. ಗಮನಾರ್ಹ ಸಂಖ್ಯೆಯಲ್ಲಿ ಮೆಡಿಕಲ್ ಕಾಲೇಜುಗಳಿರುವ ಕರ್ನಾಟಕವಷ್ಟೇ ಅಲ್ಲ, ಒಡಿಶಾದಿಂದಲೂ ಉಕ್ರೇನ್‌ಗೆ ವೈದ್ಯಕೀಯ ಪದವಿ ಪಡೆಯಲು ಹೋಗುತ್ತಾರೆ. ಈ ಸಂಬಂಧದ ವಿವರಗಳನ್ನು ಪರಿಶೀಲಿಸಿದರೆ- ಅಲ್ಲಿ ಪ್ರವೇಶ ಪರೀಕ್ಷೆಯೇ ಇಲ್ಲವಂತೆ, ಜತೆಗೆ ಶಿಕ್ಷಣ ಅಗ್ಗ. ಇಲ್ಲಿ ‘ನೀಟ್’ನಲ್ಲಿ ಸಲ್ಲದವರು ಅಲ್ಲಿಗೆ ಹೋಗಿ ಅವಧಿ ದೀರ್ಘ ಆದರೂ ಇಲ್ಲಿ ತಗಲುವ ಫೀ ಮತ್ತು ವಸತಿ ವೆಚ್ಚದ ಸಣ್ಣ ಭಾಗದಲ್ಲಿ ಮೆಡಿಕಲ್ ಗ್ರ್ಯಾಜುಯೇಟ್ ಅನಿಸಿಕೊಳ್ಳಬಹುದು. ಆದರೆ ಗುಣಮಟ್ಟ? ಇಲ್ಲಿ ಪ್ರ್ಯಾಕ್ಟೀಸ್ ಮಾಡಬೇಕೆಂದರೆ ಬರೆಯಬೇಕಾಗುವ ಪರೀಕ್ಷೆಯಲ್ಲಿ ಐವರಲ್ಲಿ ಒಬ್ಬರೂ ತೇರ್ಗಡೆ ಆಗುತ್ತಿಲ್ಲವಂತೆ, ಆದವರಿಗೂ ಇಂಟರ್ನ್‌ಶಿಪ್ ಕಡ್ಡಾಯ ಮಾಡಬೇಕಾಗಿ ಬಂದಿದೆ.

‘ಆಪರೇಷನ್ ಗಂಗಾ’ ಮೂಲಕ ಸುರಕ್ಷಿತವಾಗಿ ಬಂದರು, ಒಳ್ಳೆಯದು. ಆದರೆ ಹೋಗುವುದು ಅನಿವಾರ್ಯ ಆಗಿತ್ತೇ? ಬಹುಪಾಲಿನವರ ಆರ್ಥಿಕ, ಸಾಮಾಜಿಕ ಹಿನ್ನೆಲೆ ಏನು ಎಂಬುದನ್ನು ವಿಶ್ಲೇಷಿಸಬೇಕಾಗಿದೆ. ಭಾರತ ವಿಶ್ವಗುರು ಸ್ಥಾನವನ್ನು ಈಗಾಗಲೇ ಪಡೆದುಬಿಟ್ಟಿದೆ, ಮುಖ್ಯ ರಾಷ್ಟ್ರಗಳೆಲ್ಲ ನಮ್ಮತ್ತ ನೋಡುತ್ತಿವೆ ಎಂಬ ಪ್ರಚಾರವೂ ಇದೆ‌. ವಿಶ್ವಸಂಸ್ಥೆಯ ಸಭೆಗಳಲ್ಲಿ ಉಕ್ರೇನ್‌ ವಿಷಯದಲ್ಲಿ ಇದುವರೆಗೆ ನಾವು ಇರುವುದು ಚೀನಾ ಗುಂಪಿನಲ್ಲಿ (ಆಕ್ರಮಣದ ವಿರುದ್ಧ ಮತ ಚಲಾಯಿಸದೆ ಹೊರಗುಳಿದವರು). ನಮ್ಮವರೆಲ್ಲ ದೇಶಕ್ಕೆ ವಾಪಸಾದ ಮೇಲಾದರೂ ಸರ್ಕಾರ ದಿಟ್ಟ ನಿಲುವು ತಳೆಯುವುದೋ ನೋಡಬೇಕು. ರಷ್ಯಾ ಹಿಂದಡಿ ಇಟ್ಟೀತೆ?

ಎಚ್.ಎಸ್.ಮಂಜುನಾಥ,ಗೌರಿಬಿದನೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.