ADVERTISEMENT

ವಾಚಕರ ವಾಣಿ: ಮಾತಿಗೆ ಇರಲಿ ನಿಯಂತ್ರಣ

​ಪ್ರಜಾವಾಣಿ ವಾರ್ತೆ
Published 4 ಮೇ 2021, 19:30 IST
Last Updated 4 ಮೇ 2021, 19:30 IST

ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ವಿಶ್ಲೇಷಣೆಗಳಲ್ಲಿ ನಾವು ಬಹುಮುಖ್ಯ ಸಂಗತಿಯೊಂದನ್ನು ಕಡೆಗಣಿಸುತ್ತಿದ್ದೇವೆ. ಅದೇನೆಂದರೆ, ಪಶ್ಚಿಮ ಬಂಗಾಳದ ಚುನಾವಣಾ ಫಲಿತಾಂಶವು ಬೆಂಕಿ ಉಗುಳುವ ಭಾಷಣಕಾರರಿಬ್ಬರ ಸೋಲು ಗೆಲುವಾಗಿದೆ ಎಂಬುದು. ನರೇಂದ್ರ ಮೋದಿ ಅವರು ಇದಕ್ಕೆ ಮುನ್ನುಡಿ ಬರೆದರೆ, ಮಮತಾ ಬ್ಯಾನರ್ಜಿ ಅದಕ್ಕೆ ಮಾರ್ನುಡಿದರು. ಇದು ನಿಜಕ್ಕೂ ಪ್ರಜಾಪ್ರಭುತ್ವಕ್ಕೆ ಕಳವಳಕಾರಿ. ಏಕೆಂದರೆ ಚುನಾವಣೆ ಎಂಬುದು ಸರ್ಕಾರ ರಚಿಸಲು ಒಂದು ಅವಕಾಶವೇ ಹೊರತು ಅದು ಇಬ್ಬರು ಪರಸ್ಪರ ಕೆಸರೆರಚಲು ಇರುವ ಅವಕಾಶವಲ್ಲ.

ಮಮತಾ ಅವರನ್ನು ದೀದಿಯೆಂದೇ ಹಂಗಿಸುವ ಶೈಲಿಯಲ್ಲಿ ಮೋದಿ ಮಾತನಾಡಿದರೆ, ಮೋದಿಯವರನ್ನು ಹೊರಗಿನವರೆಂದೇ ಮಮತಾ ಹಂಗಿಸಿದರು. ಜನರ ಸಮಸ್ಯೆಗಳ ಕುರಿತು ಚರ್ಚಿಸುವ ಬದಲು ಪರಸ್ಪರ ಹೀಯಾಳಿಸುವ, ದ್ವೇಷಿಸುವ ವೈಯಕ್ತಿಕ ಮಾತುಗಳು ಇಬ್ಬರಲ್ಲೂ ಮೂಡಿಬಂದವು. ಹೀಗಾಗಿ ಈ ರೀತಿಯ ಭಾಷಣಗಳನ್ನು ಚುನಾವಣಾ ಕಣದಿಂದ ದೂರವಿಡುವ ಕಡೆ ಚುನಾವಣಾ ಆಯೋಗ ಯೋಚಿಸಬೇಕಿದೆ.

ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.