ADVERTISEMENT

ವಾಚಕರವಾಣಿ: ಎರವಲು ಮಾದರಿ ಏಕೆ?

​ಪ್ರಜಾವಾಣಿ ವಾರ್ತೆ
Published 29 ಜುಲೈ 2022, 19:31 IST
Last Updated 29 ಜುಲೈ 2022, 19:31 IST

ಮಾತೆತ್ತಿದ್ದರೆ, ಉತ್ತರಪ್ರದೇಶದ ‘ಯೋಗಿ ಮಾದರಿ’ ಆಡಳಿತದ ಬಗೆಗೆ ಪ್ರಸ್ತಾಪಿಸುತ್ತಾರೆ ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಅಪರಾಧ ಕೃತ್ಯಗಳನ್ನು ನಿಗ್ರಹಿಸಲು ಅವರ ಮಾದರಿಯೇ ಬೇಕೆ? ಅದಕ್ಕೆ ತಮ್ಮದೇ ಸ್ವಂತ ಮಾಡೆಲ್‌ ಯಾವುದೂ ಇಲ್ಲವೇ? ಹತ್ತು ದಿನಗಳಲ್ಲಿ ರಾಜ್ಯದಲ್ಲಿ ಮೂರು ಹತ್ಯೆಗಳಾಗಿರುವುದು ಗೃಹ ಇಲಾಖೆಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಬರೀ ಹೇಳಿಕೆ ನೀಡಿ ಸುಮ್ಮನಾಗದೆ, ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯ. ಅದಕ್ಕಾಗಿ ಎರವಲು ಮಾದರಿ ಅನುಸರಿಸುವುದೇನೂ ಬೇಕಾಗಿಲ್ಲ. ಕರ್ನಾಟಕದ ಕಾನೂನು–ಕಟ್ಟಲೆಗಳೇ ಸಾಕು.

- ಬಸನಗೌಡ ಪಾಟೀಲ,ಯರಗುಪ್ಪಿ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT