ADVERTISEMENT

ಎಲ್‌ಐಸಿ: ಅನುಮಾನ ನಿವಾರಿಸಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 5 ಫೆಬ್ರುವರಿ 2020, 15:27 IST
Last Updated 5 ಫೆಬ್ರುವರಿ 2020, 15:27 IST

ಭಾರತೀಯ ಜೀವ ವಿಮಾ ನಿಗಮದಲ್ಲಿ ಕೇಂದ್ರ ಸರ್ಕಾರ ಹೊಂದಿರುವ ಬಂಡವಾಳದ ಪೈಕಿ
ಶೇ 10ರವರೆಗೆ ವಿಕ್ರಯ ಮಾಡಲಾಗುವುದು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿಯ ಬಜೆಟ್
ಮಂಡನೆ ವೇಳೆ ತಿಳಿಸಿದ್ದಾರೆ. ಸಮಾಜದ ವಿವಿಧ ಸ್ತರಗಳಿಗೆ ಸೇರಿದ ಜ‌ನ, ಬಹುಮುಖ್ಯವಾಗಿ ಪಾಲಿಸಿದಾರರು ಎಲ್ಐಸಿ ಖಾಸಗೀಕರಣದ ವಿರುದ್ಧ ದನಿ ಎತ್ತಿದ್ದಾರೆ.

ವಿಮಾ ಕ್ಷೇತ್ರದಲ್ಲಿ ಖಾಸಗಿ ಕಂಪನಿಗಳ ಪ್ರಬಲ ಸ್ಪರ್ಧೆಯ ನಡುವೆಯೂ ಎಲ್ಐಸಿ ತನ್ನ ವಿಶ್ವಾಸಾರ್ಹತೆ ಕಾಪಾಡಿಕೊಂಡು ಬಂದಿದೆ. ಕೇಂದ್ರ ಸರ್ಕಾರ ತನ್ನ ಪಾಲಿನ ಶೇ 10ರಷ್ಟನ್ನು ಮಾರಾಟ ಮಾಡುವುದರಿಂದ ಸದ್ಯದ ಮಟ್ಟಿಗೆ ಯಾವುದೇ ರೀತಿಯ ತೊಂದರೆಯಿಲ್ಲ ಎನ್ನಬಹುದು. ಆದರೆ ಈಗ ಸರ್ಕಾರದ ಷೇರುಗಳನ್ನು ಖರೀದಿಸುವ ಖಾಸಗಿ ಕಂಪನಿಗಳು ನಿಗಮದ ಆಡಳಿತ ವ್ಯವಸ್ಥೆಯಲ್ಲಿ ಮೂಗು ತೂರಿಸಬಹುದು. ಪಾಲಿಸಿದಾರರ ಹಿತ ರಕ್ಷಿಸುವುದಾಗಿ ಸರ್ಕಾರ ಹೇಳಿದೆಯಾದರೂ ಜನರ ಅನುಮಾನಗಳನ್ನು ದೂರ ಮಾಡುವ ಕೆಲಸ ಆಗಬೇಕು.

ಕೆ.ವಿ.ವಾಸು, ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.