ADVERTISEMENT

ಕಸ ನಿರ್ವಹಣೆಗೆ ಪ್ರತ್ಯೇಕ ಕಂಪನಿ ತರವಲ್ಲ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 4 ಮಾರ್ಚ್ 2021, 19:31 IST
Last Updated 4 ಮಾರ್ಚ್ 2021, 19:31 IST

ಬೃಹತ್‌ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ) ಕಸ ನಿರ್ವಹಣೆಗೆ ಪ್ರತ್ಯೇಕ ಕಂಪನಿ ಪ್ರಾರಂಭಿಸಲು ನಿರ್ಧರಿಸಿರುವುದು ಸರಿಯಲ್ಲ. ನಗರದ ಕಸ ನಿರ್ವಹಣೆಯನ್ನೂ ಮಾಡಲಾರದ ಪಾಲಿಕೆ ತನ್ನ ಮೂಲಭೂತ ಜವಾಬ್ದಾರಿಯಿಂದ ನುಣುಚಿಕೊಳ್ಳುವ ತಂತ್ರ ಇದಾಗಿದೆ. ರಾಜ್ಯ ಸರ್ಕಾರ ಇತ್ತೀಚೆಗೆ ಬಿಬಿಎಂಪಿಗೆ ಪ್ರತ್ಯೇಕ ಕಾಯ್ದೆ‌ ರೂಪಿಸಿ ಅದರಲ್ಲಿ ಮಿಷನ್ ಬೆಂಗಳೂರು– 2022 ಹೆಸರಿನಲ್ಲಿ ಬೆಂಗಳೂರಿನ ‌ಕಸ‌ ನಿರ್ವಹಣೆಗೆ ಪ್ರತ್ಯೇಕ ಸಾಂಸ್ಥಿಕ ರೂಪ ನೀಡುವ ಪ್ರಸ್ತಾಪವನ್ನು ಇಟ್ಟಿತ್ತು. ಕಸ ನಿರ್ವಹಣೆಗೆ ಈಗ ವಿಧಿಸುವ ಸೆಸ್ ಜೊತೆ ಮನೆಯ ವಿದ್ಯುತ್ ಮೀಟರ್ ಸಂಖ್ಯೆಯ ಆಧಾರದಲ್ಲಿ ಮೀಟರ್ ಒಂದಕ್ಕೆ ₹ 200 ಶುಲ್ಕ ವಿಧಿಸುವ ಪ್ರಸ್ತಾಪವೂ ಇತ್ತು. ಜನಸಾಮಾನ್ಯರ ಬದುಕಿನ ಕಷ್ಟ ಗೊತ್ತಿರುವ ಹಲವರು ಇದನ್ನು ವಿರೋಧಿಸಿದ್ದರು. ಶುಲ್ಕ ವಿಧಿಸುವುದನ್ನು ತಾತ್ಕಾಲಿಕವಾಗಿ ಮುಂದೂಡುವ‌ ಹೇಳಿಕೆ ಬಂದಿತ್ತು. ಆದರೆ ಈಗಿನ ಪ್ರಸ್ತಾಪ ಮೇಲ್ನೋಟಕ್ಕೆ ‌ಬಹಳ ಆಕರ್ಷಕ ಎನಿಸುತ್ತಿದೆಯಾದರೂ ಬಿಬಿಎಂಪಿಯಿಂದ ಕಂಪನಿಯ ಹಿಡಿತಕ್ಕೆ ಕೊಡುವುದೆಂದರೆ ಜನಸಾಮಾನ್ಯರ ‌ಮೇಲೆ ಹೊರೆ ಹೊರಿಸುವುದೇ ಆಗಿದೆ.

ಅಲ್ಲದೆ ಸಾವಿರಾರು ಪೌರ ಕಾರ್ಮಿಕರ ಬದುಕು ಈಗಲೇ ಅತಂತ್ರ. ಅದು ಮುಂದೆ ಪರತಂತ್ರವಾಗಲಿದೆ ಹಾಗೂ ವಾರ್ಷಿಕ ಸುಮಾರು ಸಾವಿರ‌ ಕೋಟಿಯ ಹತ್ತಿರದ ವಹಿವಾಟಿನ ಕಸ ನಿರ್ವಹಣೆ ಸಂಪೂರ್ಣವಾಗಿ ಖಾಸಗಿಯವರ ಜೇಬು ತುಂಬುವ ವ್ಯವಹಾರವಾಗಲಿದೆ. ಇದರ ವಿರುದ್ಧ‌ ನಾಗರಿಕರು ಮಾತನಾಡಲೇ ಬೇಕು.

- ವಿಮಲಾ ಕೆ.ಎಸ್., ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.